ಶಾಂಘೈ: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಒಂದನೇ ಹಂತದಲ್ಲಿ ಭಾರತ 7 ಪದಕಗಳನ್ನು ತನ್ನದಾಗಿಸಿಕೊಂಡಿದೆ.
5 ಚಿನ್ನದ ಪದಕಗಳು:
ಭಾರತ ಪುರುಷರ ರಿಕರ್ವ್ ತಂಡ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾ ತಂಡವನ್ನು ಫೈನಲ್‌ನಲ್ಲಿ ಸೋಲಿಸಿ ಇತಿಹಾಸ ಬರೆದಿದೆ. ಧೀರಜ್, ತರುಣ್‌ದೀಪ್ ಮತ್ತು ಪ್ರವೀಣ್ ಇದ್ದ ರಿಕರ್ವ್ ತಂಡ ದಕ್ಷಿಣ ಕೊರಿಯಾ ವಿರುದ್ಧ 5-1 ಅಂತರದಿಂದ ಗೆಲುವು ಸಾಧಿಸಿ ಚಿನ್ನದ ಪದಕವನ್ನು 14 ವರ್ಷಗಳ ಬಳಿಕ ಗೆದ್ದಿದೆ.
ಅತ್ತ ಮಹಿಳೆಯರ ಕಾಂಪೌಂಡ್ ಇಂಡ್ಯುವಿಜುಯಲ್‌ನಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಚಿನ್ನದ ಪದಕವನ್ನು ಗೆದ್ದಿದ್ದಾರೆ
ಇನ್ನು ಟೀಮ್ ಕಾಂಪೌಂಡ್ ಸುತ್ತಿನಲ್ಲಿ ಭಾರತದ ಪುರುಷರ ತಂಡ ನೆದರ್ಲೆಂಡ್ಸ್ ಸೋಲಿಸುವ ಮೂಲಕ ಚಿನ್ನದ ಪದಕ, ಇಟಲಿ ಸೋಲಿಸಿದ ಮಹಿಳೆಯರ ತಂಡ ಚಿನ್ನದ ಪದಕ ಮತ್ತು ಜ್ಯೋತಿ ಹಾಗೂ ಅಭಿಷೇಕ್ ಮಿಕ್ಸ್ಡ್ ತಂಡ ಎಸ್ಟೋನಿಯಾವನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದಿದೆ.
ಎರಡು ಬೆಳ್ಳಿ, ಒಂದು ಕಂಚು
ಮೆಕ್ಸಿಕೊ ವಿರುದ್ಧ ಗೆದ್ದ ಅಂಕತ ಭಗತ್ ಹಾಗೂ ಧೀರಜ್ ಮಿಕ್ಸ್ಡ್ ಟೀಮ್ ಕಂಚಿನ ಪದಕವನ್ನು ಗೆದ್ದರೆ, ಪುರುಷರ ವಿಭಾಗದಲ್ಲಿ ಪ್ರಿಯಾನ್ಷ್ ಮತ್ತು ಮಹಿಳೆಯರ ವಿಭಾಗದಲ್ಲಿ ದೀಪಿಕಾ ಕುಮಾರಿ ಬೆಳ್ಳಿ ಪದಕವನ್ನು ಗೆದ್ದರು.





