ಪ್ಯಾರಿಸ್: ವಿನೇಶ್ ಅನರ್ಹ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಅಂತಿಮ್ ಪಂಘಲ್‌ರನ್ನು ಗಡಿಪಾರು ಮಾಡಲು ನಿರ್ಧಾರ ಮಾಡಲಾಗಿದೆ.
ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡು ವಿನೇಶ್ ಫೋಗಟ್ ಕುಸ್ತಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ ತಟ್ಟಿದ್ದು, ಭಾರತೀಯ ಕುಸ್ತಿಪಟುವನ್ನು ಪ್ಯಾರಿಸ್‌ನಿಂದ ಗಡಿಪಾರು ಮಾಡಲು ನಿರ್ಧರಿಸಲಾಗಿದೆ.
ಭಾರತೀಯ ಕುಸ್ತಿಪಟು ಅಂತಿಮ್ ಪಂಘಲ್ ಅವರು ತಮ್ಮ ಮಾನ್ಯತಾ ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ ಅಶಿಸ್ತಿನ ವರ್ತನೆ ಮೇರೆಗೆ ಅವರನ್ನು ಗಡಿಪಾರು ಮಾಡಲು ನಿರ್ಧಾರ ಮಾಡಲಾಗಿದೆ.
ಒಲಿಂಪಿಕ್ಸ್ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಲು ಅಂತಿಮ್‌ಗೆ ನೀಡಲಾಗಿದ್ದ ಅಧಿಕೃತ ಐಡಿ ಕಾರ್ಡ್‌ನ್ನು ತನ್ನ ಸಹೋದರಿ ನಿಶಾ ಅವರಿಗೆ ನೀಡಿದ್ದಾರೆ.
ನಿಯಮದ ಪ್ರಕಾರ ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಆಟಗಾರದಲ್ಲದವರು ಪ್ರವೇಶಿಸುವಂತಿಲ್ಲ. ಹೀಗಾಗಿ ಅಂತಿಮ್ ಅವರನ್ನು ಒಲಿಂಪಿಕ್ಸ್ ಗ್ರಾಮದಿಂದ ಗಡಿಪಾರು ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.