Mysore
22
scattered clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ಆರ್‌ಸಿಬಿ ತಂಡದ ಪ್ರಧಾನ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಕ್ರವಾರ ತನ್ನ ಮುಖ್ಯ ಕೋಚ್ ಆಗಿ ಅನುಭವಿ ಆ್ಯಂಡಿ ಫ್ಲವರ್ ಅವರನ್ನು ನೇಮಿಸಿದ್ದು, ಮೈಕ್ ಹೆಸನ್ ಮತ್ತು ಸಂಜಯ್ ಬಂಗಾರ್ ಅವರ ಅವಧಿಯನ್ನು ಅಧಿಕೃತವಾಗಿ ಕೊನೆಗೊಳಿಸಿದೆ.

ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಹೆಸ್ಸನ್ ಹಾಗೂ ಮುಖ್ಯ ತರಬೇತುದಾರ ಬಂಗಾರ್ ಇಬ್ಬರ ಒಪ್ಪಂದಗಳು ಸೆಪ್ಟೆಂಬರ್ ನಲ್ಲಿ ನವೀಕರಣಕ್ಕೆ ಸಿದ್ಧವಾಗಿದ್ದವು. ಆದರೆ ಫ್ರಾಂಚೈಸಿ ಇಬ್ಬರನ್ನು ಮುಂದುವರಿಸದಿರಲು ನಿರ್ಧರಿಸಿತು.

RCB ಯ ಉಪಾಧ್ಯಕ್ಷ ಹಾಗೂ ಮುಖ್ಯಸ್ಥರಾದ ರಾಜೇಶ್ ಮೆನನ್ ಅವರು ಲಂಡನ್ ನಲ್ಲಿ ಫ್ಲವರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

ಐಪಿಎಲ್ 2024 ರಲ್ಲಿ ಆರ್ ಸಿಬಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆ ಎಂದು ಫ್ಲವರ್ ಹೇಳಿದ್ದಾರೆ.

“ಆರ್ ಸಿಬಿಗೆ ಸೇರುತ್ತಿರುವುದಕ್ಕೆ ನನಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ನಾನು ಗೌರವಿಸುವ ಇಬ್ಬರು ತರಬೇತುದಾರರಾದ ಮೈಕ್ ಹೆಸನ್ ಮತ್ತು ಸಂಜಯ್ ಬಂಗಾರ್ ಅವರ ಕೆಲಸವನ್ನು ನಾನು ಗುರುತಿಸುತ್ತೇನೆ ಹಾಗೂ ಆರ್ ಸಿಬಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸವಾಲನ್ನು ನಾನು ಎದುರು ನೋಡುತ್ತಿದ್ದೇನೆ’’ ಎಂದು ಐಪಿಎಲ್ ನ ಹಿಂದಿನ ಎರಡು ಋತುಗಳಲ್ಲಿ ಲಕ್ನೋ ಸೂಪರರ್ ಜೈಂಟ್ಸ್ ಗೆ ತರಬೇತಿ ನೀಡಿದ್ದ ಫ್ಲವರ್ ಹೇಳಿದರು.

ಫ್ಲವರ್ ಐಪಿಎಲ್ ನಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ, ಇದಕ್ಕೂ ಮೊದಲು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ನೊಂದಿಗೆ ಕೆಲಸ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ