ಪ್ಯಾರಿಸ್: ಒಲಂಪಿಕ್ಸ್ ಕ್ರೀಡಾಕೂಟದ ಹಾಕಿ ವಿಭಾಗದಲ್ಲಿ ನಿನ್ನೆ (ಆ.5) ನಡೆದ ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವಿನ ಕ್ವಾರ್ಟರ್ ಫೈನಲ್ಸ್ ಪಂದ್ಯಾವಳಿಯಲ್ಲಿ ಭಾರತ ತಂಡದ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಸೆಮಿಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇದೇ ಆಗಸ್ಟ್ 6 ರಂದು ಸಮಿಸ್‌ನಲ್ಲಿ ಬಲಿಷ್ಠ ಜರ್ಮನಿ ತಂಡವನ್ನು ಭಾರತ ಎದುರಿಸಲಿದೆ.
ಈ ವೇಳೆಯಲ್ಲಿಯೇ ಭಾರತ ತಂಡಕ್ಕ ಬಹು ದೊಡ್ಡ ಹೊಡೆತ ಬಿದ್ದಿದೆ. ಭಾರತ ತಂಡದ ಅನುಭವಿ ಆಟಗಾರ ಅಮಿತ್ ರೋಹಿದಾಸ್ ಅವರ ಮೇಲೆ ಒಂದು ಪಂದ್ಯ ನಿಷೇಧಿಸಿದ ಆದೇಶ ಹೊರಡಿಸಲಾಗಿದೆ.
ಇತ್ತ ನಿನ್ನೆ ನಡೆದ ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಅನುಭವಿ ಡಿಫೆಂಡರ್ ಅಮಿತ್ ರೋಹಿದಾಸ್ ಅವರಿಗೆ ನಿಯಮ ಉಲ್ಲಂಘನೆ ಆಧಾರದಲ್ಲಿ ರೆಡ್ ಕಾರ್ಡ್ ನೀಡಲಾಗಿತ್ತು. ಇದಾದ ಬಳಿಕ ಬ್ರಿಟನ್ ವಿರುದ್ಧ ಕೇವಲ ಹತ್ತು ಜನರ ಶ್ರೇಷ್ಠ ಹೋರಾಟದ ಫಲವಾಗಿ ಭಾರತ ಸೆಮಿಸ್ ತಲುಪಿತ್ತು. ಇದಾದ ಒಂದು ದಿನದ ಬಳಿಕ ಭಾರತ ತಂಡದ ಡಿಫೆಂಡರ್ ಅಮಿತ್ ವಿರುದ್ಧ ಅಂತರಾಷ್ಟ್ರೀಯ ಹಾಕಿ ಫೆಡರೇಷನ್ ಒಂದು ಪಂದ್ಯ ನಿಷೇಧ ಏರಿದೆ. ಈ ಮೂಲಕ ಭಾರತ ತಂಡಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
ಈ ಬಗ್ಗೆ ಮಾತನಾಡಿರುವ ಹಾಕಿ ಫೆಡರೇಷನ್, ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವಣ ಪಂದ್ಯದಲ್ಲಿ ಅಮಿತ್ ರೋಹಿದಾಸ್ ಅವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಅವರಿಗೆ ಮುಂದಿನ ಒಂದು ಪಂದ್ಯ ನಿಷೇಧಿಸಲಾಗಿದೆ ಎಂದು ಹೇಳಿದೆ. ಭಾರತ ತಂಡ ಅಮಿತ್ ಹೊರತುಪಡಿಸಿ ಉಳಿದ ಹದಿನೈದು ಆಟಗಾರರ ತಂಡವನ್ನು ರಚಿಸಬೇಕಿದೆ.