ಪ್ಯಾರಿಸ್: ಒಲಂಪಿಕ್ಸ್‌ನ 57 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ಭರವಸೆಯ ಕುಸ್ತಿಪಟು ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದಿದ್ದಾರೆ. ಇದು ಭಾರತಕ್ಕೆ ಒಲಿದ ಐದನೇ ಕಂಚಿನ ಪದಕವಾಗಿದೆ.
ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಡೇರಿಯನ್ ಟೋಯಿ ಕ್ರೂಜ್ ವಿರುದ್ಧ 13-5 ಅಂಕಗಳ ಅಂತರದಿಂದ ಅಮನ್ ಗೆದ್ದು ಬೀಗಿದರು.
ಆರಂಭದಲ್ಲಿ ಕೊಂಚ ಮುನ್ನಡೆ ಸಾಧಿಸಿದ ಪೋರ್ಟೊ ರಿಕನ್‌ನ ಕ್ರೂಜ್ ಅವರು ಬಳಿಕ ಅಮನ್ ಅವರ ಸಮಯೋಜಿತ ಆಟದ ನೆರವಿನಿಂದ ಗೆದ್ದು ಬೀಗಿದರು. ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಅಮನ್ ಪಂದ್ಯದುದ್ದಕ್ಕೂ ಮುನ್ನಡೆ ಕಾಯ್ದುಕೊಂಡೇ ನಡೆದರು. ಎಲ್ಲಿಯೂ ಎದುರಾಳಿಗೆ ಅವಕಾಶ ಮಾಡಿಕೊಡಲೇ ಇಲ್ಲ. ಸೆಮಿ ಫೈನಲ್ಸ್ ಸೋಲಿನ ನೋವನ್ನು ಈ ಪಂದ್ಯದಲ್ಲಿ ತೀರಿಸಿಕೊಂಡರು.
ಮೊದಲ ಒಲಂಪಿಕ್ಸ್‌ನಲ್ಲಿಯೇ ಕಂಚಿನ ಪದಕ ಗೆಲ್ಲುವ ಮೂಲಕ ತಮ್ಮ ಚೊಚ್ಚಲ ಒಲಂಪಿಕ್ಸ್‌ನ್ನು ಪದಕದೊಂದಿಗೆ ಅಂತ್ಯಗೊಳಸಿದರು ಅಮನ್ ಸೆಹ್ರಾವತ್





