Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

Paris Olympics 2024: ಸೆಮಿಸ್‌ನಲ್ಲಿ ಎಡವಿದ ಅಮನ್‌; ನಾಳೆ ಕಂಚಿಗಾಗಿ ಹೋರಾಟ

ಪ್ಯಾರಿಸ್‌: ಭಾರತದ ಯುವ ಕುಸ್ತಿಪಟು ಅಮನ್‌ ಸೆಹ್ರಾವತ್‌ ಅವರು ಪ್ರಾನ್ಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್‌ನ 57 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸೆಮಿಫೈನಲ್ಸ್‌ನಲ್ಲಿ ಸೋಲು ಕಂಡಿದ್ದಾರೆ.

ಗುರುವಾರ (ಆ.8) ನಡೆದ ಸೆಮಿ ಫೈನಲ್ಸ್‌ ಪಂದ್ಯದಲ್ಲಿ ಜಪಾನ್‌ನ ರೇ ಹಿಗುಚಿ ವಿರುದ್ಧ 10-0 ಅಂತರದಿಂದ ದೊಡ್ಡ ಸೋಲು ಕಂಡ ಅಮನ್‌ ಅವರು ಚಿನ್ನ ಗೆಲ್ಲುವ ಅವಕಾಶ ಕೈಚೆಲ್ಲಿಕೊಂಡಿದ್ದಾರೆ. ಪ್ರಬಲ ಪೈಪೋಟಿ ನೀಡಿದ ಹಿಗುಚಿ ಸೆಮಿ ಪಂದ್ಯವನ್ನ ಕೇವಲ ಎರಡೇ ನಿಮಿಷದಲ್ಲಿ ಮುಗಿಸಿದರು.

ಈ ಸೋಲಿನೊಂದಿಗೆ ಅಮನ್‌ ಅವರಿಗೆ ಮತ್ತೊಂದು ಅವಕಾಶ ಒದಗಿಬಂದಿದ್ದು, ಕಂಚಿನ ಪದಕ್ಕಾಗಿ ನಾಳೆ ಸೆಣೆಸಾಡಲಿದ್ದಾರೆ. ಇನ್ನು ಮೂರನೇ ಪದಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಅಮನ್‌ ಫೋರ್ಟೊರಿಕೋದ ಡೇರಿಯನ್‌ ಕ್ರೂಜ್‌ ಅವರ ವಿರುದ್ಧ ಆಡಲಿದ್ದಾರೆ.

Tags:
error: Content is protected !!