ರೋಲ್ಯಾಂಡ್: ಇಲ್ಲಿನ ಗ್ಯಾರಸ್‌ನ ಕ್ಲೇಕೋರ್ಟ್‌ನಲ್ಲಿ ನಡೆದ ಫ್ರೆಂಚ್ ಓಪನ್ 2024ರ ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಜಾಂಡರ್ ಜ್ವೆರೆವ್ ವಿರುದ್ಧ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ನೇರ ಸೆಟ್‌ಗಳ ಮೂಲಕ ಗೆಲುವು ದಾಖಲಿಸಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇದು ಅಲ್ಕರಾಜ್ ಅವರ ವೃತ್ತಿ ಜೀವನದ ಮೊದಲ ಫ್ರೆಂಚ್ ಓಪನ್ ಹಾಗೂ ವೈಯಕ್ತಿಕ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.
ಪ್ರಶಸ್ತಿ ಸುತ್ತಿನಲ್ಲಿ ಅಲ್ಕರಾಜ್ ಜರ್ಮನಿಯ ಜ್ವೆರೆವ್ ವಿರುದ್ಧ ನಿರ್ಣಾಯಕ ಸೆಟ್‌ಗಳಿಂದ ಗೆದ್ದು ಬೀಗಿದರು. ಒಟ್ಟು 4 ಗಂಟೆ 19 ನಿಮಿಷಗಳ ಕಾದಾಟದಲ್ಲಿ ಅಲ್ಕರಾಜ್ 6-3, 2-6, 5-7, 6-1, 6-2 ಸೆಟ್‌ಗಳಿಂದ ಜಯ ದಾಖಲಿಸಿದರು. ಆ ಮೂಲಕ ಮೊದಲ ಫ್ರೆಂಚ್ ಓಪನ್ ಟ್ರೋಫಿಗೆ ಮತ್ತಿಕ್ಕಿದರು. ಮತ್ತು ಫ್ರೆಂಚ್ ಓಪನ್ ಗೆದ್ದ ಏಳನೇ ಸ್ಪೇನ್ ಆಟಗಾರ ಎಂಬ ಹೆಗ್ಗಳಿಕೆಗೂ ಇವರು ಭಾಜನರಾಗಿದ್ದಾರೆ.
ಅಲ್ಕರಾಜ್‌ಗೆ ಸಿಕ್ಕ ಮೊತ್ತವೆಷ್ಟು ಗೊತ್ತಾ?: ಫ್ರೆಂಚ್ ಓಪನ್ ಪ್ರಶಸ್ತಿ ಬಾಚಿಕೊಂಡ ಕಾರ್ಲೋಸ್ ಅಲ್ಕರಾಜ್ ಅವರಿಗೆ 21.62 ಕೋಟಿ ಬಹುಮಾನ ಸಿಕ್ಕರೇ, ರನ್ನರ್‌ಅಪ್ ಆದ ಜ್ವೆರೆವ್‌ಗೆ 10.81 ಕೋಟಿ ರೂ ಬಹುಮಾನ ಸಿಕ್ಕಿದೆ. ಇನ್ನು ಸೆಮಿಸ್‌ನಲ್ಲಿ ನಿರ್ಗಮಿಸಿದ ಜಾನಿಕ್ ಸಿನ್ನರ್ ಹಾಗೂ ಕ್ಯಾಸ್ಪರ್ ರೂಡ್ ಅವರಿಗೆ 650,000 ಡಾಲರ್ ಮೊತ್ತ ನಗದು ನೀಡಲಾಗಿದೆ.