Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಇದೇ ಕಾರಣಕ್ಕೆ ಹಾರ್ದಿಕ್‌ ಬದಲು ಸೂರ್ಯ ಅವನ್ನು ಕ್ಯಾಪ್ಟನ್‌ ಮಾಡಿದ್ದು ಎಂದ ಅಗರ್ಕರ್‌!

ನವದೆಹಲಿ: ಅಮೇರಿಕಾ ಹಾಗೂ ವೆಸ್ಟ್‌ ಇಂಡೀಸ್‌ ಸಹಭಾಗಿತ್ವದಲ್ಲಿ ನಡೆದ ಟಿ20 ವಿಶ್ವಕಪ್‌ನ್ನು ರೋಹಿತ್‌ ನಾಯಕತ್ವದ ಟೀ ಇಂಡಿಯಾ ಜಯಿಸಿತು. ಇದಾದ ಬಳಿಕ ರೋಹಿತ್‌ ಟಿ20ಗೆ ವಿದಾಯ ಘೋಷಿಸಿದ್ದರು.

ಇನ್ನು ಈ ವಿಶ್ವಕಪ್‌ನಲ್ಲಿ ಉಪನಾಯಕರಾಗಿದ್ದ ಹಾರ್ದಿಕ್‌ ಪಾಂಡ್ಯ ಅವರೇ ಮುಂದಿನ ಟಿ20 ತಂಡದ ನಾಯಕ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ಎಲ್ಲಾ ಲೆಕ್ಕಗಳನ್ನು ತಲೆ ಕೆಳಗಾಗಿ ಮಾಡಿದ ಬಿಸಿಸಿಐ ನೂತನ ಟಿ20 ನಾಯಕನಾಗಿ ಸೂರ್ಯಕುಮಾರ್‌ ಯಾದವ್‌ ಅವರನ್ನು ನೇಮಕ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇದರ ಜೊತೆಗೆ ಉಪ ನಾಯಕನಾಗಿ ಆದರೂ ಹಾರ್ದಿಕ್‌ ಅವರನ್ನು ನೇಮಕ ಮಾಡದೇ ಶುಬ್‌ಮನ್‌ ಗಿಲ್‌ಗೆ ಬಿಸಿಸಿಐ ಮಣೆ ಹಾಕಿತ್ತು.

ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ಶ್ರೀಲಂಕಾ ಪ್ರವಾಸಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿನ ಈ ಬದಲಾವಣೆ ಬಗ್ಗೆ ಎಲ್ಲರಲ್ಲಿಯೂ ಹಲವಾರು ಸಂದೇಹಗಳನ್ನು ಹುಟ್ಟುಕೊಂಡಿದ್ದು, ಈ ಎಲ್ಲದಕ್ಕೂ ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಹಾರ್ದಿಕ್‌ಗೆ ಸಂಬಂಧಿಸಿದಂತೆ, ಅವರು ಇನ್ನೂ ನಮಗೆ ಅತ್ಯಂತ ಪ್ರಮುಖ ಆಟಗಾರರಾಗಿದ್ದಾರೆ. ಫಿಟ್‌ನೆಸ್ ಅವರಿಗೆ ನಿಸ್ಸಂಶಯವಾಗಿ ಸವಾಲಾಗಿದ್ದು, ಅದು ಮುಂದಿನ ದಿನಗಳಲ್ಲಿ ಕೋಚ್ ಅಥವಾ ಆಯ್ಕೆದಾರರಿಗೆ ಕಷ್ಟ ತಂದೊಡ್ಡುತ್ತವೆ. ಹಾಗಾಗಿ ತಂಡಕ್ಕೆ ಹಾಗೂ ನಮಗೆ ಹೆಚ್ಚಾಗಿ ಲಭ್ಯವಿರುವ ವ್ಯಕ್ತಿಯನ್ನು ಬಯಸುತ್ತೇವೆ. ಡ್ರೆಸ್ಸಿಂಗ್‌ ರೂಂ ಸೇರಿದಂತೆ ಸೂರ್ಯ ಯಾದವ್‌ ಅವರಿಗೆ ಕ್ಯಾಪ್ಟನ್ ಆಗಲು ಇರಬೇಕಾದ ಗುಣಗಳನ್ನು ಹೊಂದಿದ್ದಾರೆ ಅವರನ್ನು ಮುಂದಿನ ಟಿ20 ತಂಡದ ನಾಯಕನಾಗಿ ಆಯ್ಕೆ ಮಾಡಿದ್ದೇವೆ.

ನಾವು ಹಾರ್ದಿಕ್ ಅವರನ್ನು ಉತ್ತಮವಾಗಿ ನಿರ್ವಹಿಸಬಹುದು ಎಂದು ನಾವು ಭಾವಿಸುತ್ತೇವೆ, ವಿಶ್ವಕಪ್‌ನಲ್ಲಿ ಅವರು ಬ್ಯಾಟ್ ಮತ್ತು ಬಾಲ್‌ನಿಂದ ಏನು ಮಾಡಬಹುದು ಎಂಬುದನ್ನು ನಾವು ನೋಡಿದ್ದೇವೆ. ಆದರೆ ತಂಡಕ್ಕೆ ಡೀರ್ಘಾವಧಿಯ ನಾಯಕನ ಅವಶ್ಯಕತೆಯಿದ್ದು, ಹಾರ್ದಿಕ್‌ಗೆ ಬದಲಗಾಗಿ ಸೂರ್ಯಕುಮಾರ್‌ ಮೊರೆ ಹೋಗಿದ್ದೇವೆ ಎಂದು ಅಗರ್ಕರ್‌ ತಿಳಿಸಿದರು.

Tags: