ಬೆಂಗಳೂರು :ಆರ್‌ಸಿಬಿ ತಂಡದ ವಿಜಯೋತ್ಸವದ ವೀಕ್ಷಣೆಗೆ ಬಂದಿದ್ದ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಕ್ಕೆ 10 ಅಭಿಮಾನಿಗಳು ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕ್ರೀಡಾಂಗಣದ ಸುತ್ತಮುತ್ತ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕಾಲ್ತುಳಿತದಲ್ಲಿ ಹಲವರಿಗೆ ಗಂಭೀರವಾಗಿ ಗಾಯಗಳಾಗಿದೆ. ಅದರಲ್ಲೂ ಹೆಚ್ಚು ಯುವತಿಯರು ಹಾಗೂ ಪುಟ್ಟಮಕ್ಕಳೆ ಇದ್ದಾರೆ.
ಇನ್ನೂ 20 ಮಂದಿ ಅಭಿಮಾನಿಗಳು ಐಸಿಯುನಲ್ಲಿ ಇದ್ದಾರೆ. ಮೃತಪಟ್ಟವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸರು ಮನವಿ
ನಿಮ್ಮ ಪ್ರಾಣ ಮುಖ್ಯವಾಗಿದೆ. ಹೆಚ್ಚು ಅಭಿಮಾನಿಗಳು ಇರುವುದರಿಂದ ಕಾಲ್ತುಳಿತ ಉಂಟಾಗುತ್ತದೆ. ದಯವಿಟ್ಟು ಎಲ್ಲರು ಹಿಂದುರಿಗಿ. ನಿಮ್ಮ ಪ್ರಾಣ ಮುಖ್ಯ ಎಂದು ಪೊಲೀಸರು ಮನವಿ ಮಾಡುತ್ತಿದ್ದಾರೆ.





