ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ ಫೈನಲ್‌ನಲ್ಲಿ ಅನರ್ಹಗೊಂಡಿರುವ ವಿನೇಶಾ ಫೋಗಟ್ ಅವರಿಗೆ ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ ಮೂಲಕ ಸ್ಫೂರ್ತಿದಾಯಕ ಸಂದೇಶ ಹಂಚಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಅನರ್ಹಗೊಂಡಿರುವುದು ನಿಜಕ್ಕೂ ದುರದೃಷ್ಟಕರ. ಇದರಿಂದ ನನಗೆ ನೋವಾಗಿದೆ. ವಿನೇಶ್ ಅವರ ಸಾಮಾರ್ಥ್ಯ, ಹೋರಾಟ ಮತ್ತು ಸಮರ್ಪಣಾ ಭಾವು ದೇಶಕ್ಕೆ ಸದಾ ಸ್ಫೂರ್ತಿಯಾಗಿರಲಿದೆ ಎಂದು ಹೇಳಿದ್ದಾರೆ.
ಈ ಒಂದು ಕ್ಷಣದಿಂದಾಗಿ ನೀವು ದೇಶಕ್ಕಾಗಿ ಮಾಡಿದ ಅಪಾರ ಸಾಧನೆ ಹಾಗೂ ಹೆಮ್ಮೆಯನ್ನು ಕುಗ್ಗಿಸಲು ಸಾಧ್ಯವಿಲ್ಲ. ಧೈರ್ಯವಾಗಿರಿ ವಿನೇಶ್. ನೀವು ಯಾವಾಗಲೂ ನಮ್ಮ ಚಾಂಪಿಯನ್ ಆಗಿರುತ್ತೀರಿ..! ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.