Mysore
26
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಜಿಯೋ ಜಾಲದ ನಾಗಾಲೋಟ

ಇಂಟರ್‌ನೆಟ್ ಒಂದು ಕ್ಷಣ ಸ್ಥಗಿತಗೊಂಡರೆ ಜಗತ್ತು ತಿರುಗುವುದನ್ನೇ ಮರೆತಂತಹ ಅನುಭವವಾಗುತ್ತದೆ. ಅಷ್ಟರ ಮಟ್ಟಿಗೆ ಇಂಟರ್‌ನೆಟ್ ಮಾನವ ಜಗತ್ತನ್ನು ಆವರಿಸಿದೆ. ನಾನಾ ದೇಶಗಳ ಇಂಟರ್‌ನೆಟ್ ವೇಗ ಹೆಚ್ಚಿಸಲು ಸಾಕಷ್ಟು ಅನ್ವೇಷಣೆಗಳನ್ನು ಮಾಡುತ್ತಲೇ ಇದೆ. ಈ ಓಟದಲ್ಲಿ ಈಗ ಭಾರತವೂ ರೇಸಿಗಿಳಿದಿದೆ.

ದೇಶದ ಪ್ರತಿ ಮೂಲೆಗೂ ಇಂಟರ್‌ನೆಟ್‌ ವ್ಯವಸ್ಥೆ ತಲುಪಿಸಲು ಭಾರತ ಮುಂದಾಗಿದ್ದು, ಈ ಓಟದಲ್ಲಿ ದೇಶದ ದೈತ್ಯ ಟೆಲಿಕಾಂ ಕಂಪೆನಿಗಳು ಸಾಥ್ ನೀಡಿವೆ. ಭಾರತದಲ್ಲಿ ಇಂಟರ್‌ನೆಟ್‌ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸಿದ ರಿಲಯನ್ಸ್ ಜಿಯೋ ಈಗ ಮತ್ತೊಂದು ಮಹತ್ತರ ಕಾಂತ್ರಿಗೆ ಮುನ್ನಡಿಯಿಟ್ಟಿದೆ.

ಸದ್ಯ ಭಾರತದ ಮೂಲೆ ಮೂಲೆಯಲ್ಲಿಯೂ ಅತ್ಯಂತ ವೇಗದ ಅಂತಾರ್ಜಾಲ ಸೇವೆಯನ್ನು ಒದಗಿಸಲು ಜಿಯೋ ಭಾರತದ ಮೊದಲ ಸ್ಯಾಟಲೈಟ್ ಆಧಾರಿತ ಗಿಗಾಫೈಬರ್ ಸೇವೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ.
ಇತ್ತೀಚೆಗೆ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಯೋ ಭಾರತದ ಮೊದಲ ಸ್ಯಾಟಲೈಟ್ ಆಧಾರಿತ ಗಿಗಾ ಫೈಬರ್ ಸೇವೆ, ‘ಜಿಯೋ ಸ್ಪೇಸ್ ಫೈಬರ್’ ಅನ್ನು ಪ್ರದರ್ಶಿಸಿದೆ.

ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಅಂತರ್ಜಾಲವನ್ನು ಆರಂಭಿಸಲು ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ ಲಕ್ಸೆಂಬರ್ಗ್ ಮೂಲದ SESನೊಂದಿಗೆ ಪಾಲುದಾರಿಕೆ ಹೊಂದಿದೆ. ಈಗ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಬಾಹ್ಯಾಕಾಶದಿಂದ ಗಿಗಾಬಿಟ್, ಫೈಬರ್ ರೀತಿಯ ಸೇವೆಗಳನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ MEO ಸಮೂಹವಾಗಿದೆ.

ಸದ್ಯ ಭಾರತದ ಹಳ್ಳಿ ಹಳ್ಳಿಗಳಿಗೂ ಇಂಟರ್‌ನೆಟ್‌ ಸೌಲಭ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಿಲಯನ್ಸ್ ಜಿಯೋ ತನ್ನ ಬಲವರ್ಧನೆ ಮಾತ್ರವಲ್ಲದೆ ಶಿಕ್ಷಣ, ಆರೋಗ್ಯ, ಮನೋರಂಜನೆ ಹಾಗೂ ಸರ್ಕಾರದ ಸೇವೆಗಳು ಅತಿ ಸುಲಭವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!