Mysore
15
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

zoom ಕಂಪೆನಿಯಲ್ಲಿ 1,300 ಉದ್ಯೋಗ ಕಡಿತ

ಹೊಸದಿಲ್ಲಿ: ವಿಡಿಯೋ ಕಾನ್ಛರೆನ್ಸಿಂಗ್ ವ್ಯವಸ್ಥೆಯಲ್ಲಿ ಸದ್ದು ಮಾಡಿದ್ದ ಝೂಮ್ ಈಗ 1,300 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ಹೇಳಿದೆ. ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಹೆಚ್ಚಿನ ಬೇಡಿಕೆ ಗಳಿಸಿದ್ದ ಝೂಮ್ ಬಳಿಕ ಆದಾಯದಲ್ಲಿ ಕುಸಿತ ಕಂಡಿದೆ ಎಂದು ಝೂಮ್ ವಿಡಿಯೋ ಕಮ್ಯೂನಿಕೇಷನ್ಸ್ ಕಂಪೆನಿ ಹೇಳಿದೆ. ಈ ಹೆಜ್ಜೆಯು ಜಾಗತಿಕವಾಗಿ ಕಂಪೆನಿಯ ಶೇ 15ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಿಇಒ ಎರಿಕ್ ಯುವಾನ್ ತಿಳಿಸಿದ್ದಾರೆ. ಕಳೆದ ವರ್ಷ ಸಂಸ್ಥೆಯ ಷೇರುಗಳು ಶೇ 63ರಷ್ಟು ಕುಸಿತ ಕಂಡಿವೆ. 2021ರ ಹಣಕಾಸಿನ ಸಾಲಿನಲ್ಲಿ ಝೂಮ್ ಆದಾಯ ಒಂಬತ್ತು ಪಟ್ಟು ಹೆಚ್ಚಾಗಿತ್ತು. 2022ರಲ್ಲಿ ನಾಲ್ಕು ಪಟ್ಟು (ಶೇ 6.7) ಮಾತ್ರ ಹೆಚ್ಚಳಗೊಂಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!