Mysore
28
haze

Social Media

ಗುರುವಾರ, 01 ಜನವರಿ 2026
Light
Dark

ಪ್ರತಾಪ್‌ ಸಿಂಹ ಬೆಂಬಲದ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್‌ ಒಡೆಯರ್‌

ಬೆಂಗಳೂರು: ನಿನ್ನೆಯಷ್ಟೇ ( ಮಾರ್ಚ್‌ 13 ) ಲೋಕಸಭೆ ಚುನಾವಣೆಗೆ ಬಿಜೆಪಿ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದು, ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಮೈಸೂರು – ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಟಿಕೆಟ್‌ ಪಡೆದುಕೊಂಡಿದ್ದರು.

ಇನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಇಂದು ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಯದುವೀರ್‌ ಅವರಿಗೆ ಆರತಿ ಮಾಡಿ ಸ್ವಾಗತಿಸಲಾಯಿತು. ಬಳಿಕ ಮಾಧ್ಯಮದವರೊಡನೆ ಮಾತನಾಡಿದ ಯದುವೀರ್‌ ಒಡೆಯರ್‌ ಕ್ಷೇತ್ರದ ಟಿಕೆಟ್‌ನಿಂದ ವಂಚಿತರಾದ ಪ್ರತಾಪ್‌ ಸಿಂಹ ಕುರಿತಾಗಿ, ರಾಜಕೀಯ ಪ್ರವೇಶದ ಕುರಿತಾಗಿ ಹಾಗೂ ಕ್ಷೇತ್ರದ ಕುರಿತಾಗಿ ಮಾತನಾಡಿದರು.

“ನನಗೆ ತುಂಬಾ ಸಂತೋಷ ಇದೆ. ಕಳೆದ ಒಂದು ವರ್ಷದಿಂದ ರಾಜಕೀಯದ ಚರ್ಚೆ ನಡೆಯುತ್ತಾ ಇತ್ತು. ಈಗ ಅದರ ಅವಕಾಶ ಸಿಕ್ಕಿದೆ. ಇಲ್ಲಿ ರಾಜ, ಜನ ಸಾಮಾನ್ಯ ಅನ್ನೋದಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅನ್ನೋದಿಲ್ಲ. ಇಲ್ಲಿ ಎಲ್ಲರೂ ಒಂದೇ” ಎಂದು ಹೇಳಿಕೆಯನ್ನು ನೀಡಿದರು.

ಇನ್ನು ಪ್ರತಾಪ್‌ ಸಿಂಹ ಕುರಿತು ಮಾತನಾಡಿದ ಅವರು “ನನಗೆ ಟಿಕೆಟ್‌ ಸಿಕ್ಕಿರುವುದಕ್ಕೆ ಪ್ರತಾಪ್‌ ಸಿಂಹ ಅವರ ವಿರೋಧವಿಲ್ಲ. ಅವರು ಎರಡು ಬಾರಿ, ಕಳೆದ ಹತ್ತು ವರ್ಷದಿಂದ ಕೆಲಸ ಮಾಡಿದ್ದಾರೆ. ಅವರು ಹಾಕಿಕೊಟ್ಟಿರೋ ಬುನಾದಿಯನ್ನು ನಾನು ಮುಂದುವರಿಸುತ್ತೇನೆ. ಪ್ರತಾಪ್‌ ಸಿಂಹ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರ ಸಹಕಾರ ಇದ್ದೇ ಇದೆ. ನಿನ್ನೆಯೂ ಅವರ ಜತೆ ಮಾತನಾಡಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.

“9 ವರ್ಷಗಳ ಕಾಲ ಅರಮನೆ ಜವಾಬ್ದಾರಿ ಹೊತ್ತು ಜನರ ಜತೆ ಬೆರೆತಿದ್ದೇನೆ. ಸಹೋದರನಂತೆ ನನ್ನನ್ನು ಪ್ರೀತಿಸಿದ್ದಾರೆ. ಅವರ ಋಣ ತೀರಿಸುವ ಸಮಯ ಬಂದಿದೆ. ರಾಜಕೀಯದ ಬಗ್ಗೆ ಕಳೆದ ಒಂದು ವರ್ಷದಿಂದ ಮನಸ್ಸು ಮಾಡಿದ್ದೆ. ಸಾರ್ವಜನಿಕರ ಸೇವೆಗೆ ಅವಕಾಶವಿದು. ಅಧಿಕಾರವಿದ್ದರೆ ಅಭಿವೃದ್ಧಿ ಮಾಡಬಹುದು. ಪ್ರತಾಪ್‌ ನನ್ನ ಜತೆ ಮಾತನಾಡುವಾಗ ನನ್ನ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ” ಎಂದರು. ಇನ್ನು ಪ್ರತಾಪ್‌ ಸಿಂಹ ಅವರ ಈ ಮಾತನ್ನೇ ಸಂದೇಶವೆಂದುಕೊಳ್ಳುತ್ತೇನೆ ಎಂದ ಅವರು ಪ್ರತಾಪ್‌ ಸಿಂಹ ಅವರ ಬೆಂಬಲಿಗರ ಪ್ರತಿಭಟನೆ ಒಳ ಏಟು ಕೊಡಬಹುದಾ ಎಂಬ ಪ್ರಶ್ನೆಗೆ ಇಲ್ಲ ಎಲ್ಲರೂ ನನ್ನನ್ನು ಮಗ ಹಾಗೂ ಸಹೋದರನಂತೆ ಕಂಡಿದ್ದಾರೆ ಎಂದರು.

Tags:
error: Content is protected !!