Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕಾಂಗ್ರೆಸ್‌ ಭ್ರಷ್ಟಾಚಾರ ಎಲ್ಲೆ ಮೀರಿದೆ : ಯತ್ನಾಳ್‌ ಕಿಡಿ

ಬೆಂಗಳೂರು : ಕಾಂಗ್ರೆಸ್‌ ಪಕ್ಷದೊಳಗಿನ ಭ್ರಷ್ಟಾಚಾರದ ಮಟ್ಟ ಎಲ್ಲೆ ಮೀರಿದೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟಿಲ್‌ ಯತ್ನಾಳ್‌ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ನಾಯಕ ಧೀರಜ್‌ ಪ್ರಸಾದ್‌ ಸಾಹು ಒಡೆತನದ ಸ್ಥಳಗಳ ಮೇಲೆ ಆದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು 300 ಕೋಟಿಗೂ ಹೆಚ್ಚಿನ ಹಣವನ್ನು ವಶಪಡಿಸಿಕೊಂಡಿರುವ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ, ಬಿಜೆಪಿ ನಾಯಕ ಬಸನಗೌಡ ಪಾಟಿಲ್‌ ಯತ್ನಾಳ್‌ ಕಾಂಗ್ರೆಸ್‌ ಪಕ್ಷದೊಳಗಿನ ಭ್ರಷ್ಟಾಚಾರದ ಮಟ್ಟ ಎಲ್ಲೆ ಮೀರಿದೆ. ಈ ಅಕ್ರಮ ಹಣದ ಮೂಲವೇನು ? ಇಷ್ಟೊಂದು ಪ್ರಮಾಣದ ಹಣವನ್ನು ಧೀರಜ್‌ ಸಾಹು ಹೇಗೆ ಸಂಗ್ರಹಿಸಿದ್ದ ? ಇಂತಹ ಭ್ರಷ್ಟಾಚಾರದಿಂದಾಗಿಯೇ ಕಾಂಗ್ರೆಸ್‌ ರಾಜಕೀಯದಲ್ಲಿ ಅಧೋಗತಿಗೆ ಇಳಿದಿದೆ. ಇಂತಹ ಭ್ರಷ್ಟ ವ್ಯಕ್ತಿಗಳ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳುವ ಮೂಲಕ ಸರಿಯಾಗಿ ಬಿಸಿ ಮುಟ್ಟಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಒಡಿಶಾದ ಬೌಧ್‌ ಡಿಸ್ಟಿಲರಿ ಪ್ರೈವೆಟ್‌ ಲಿಮಿಟೆಡ್‌ ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಅನುಮಾನದ ಮೇರೆಗೆ ಡಿಸೆಂಬರ್‌ 6 ರಂದು ಬೌಧ್‌ ಮದ್ಯ ತಯಾರಿಕಾ ಕಂಪನಿ ಹಾಗೂ ಅದರ ಸಹ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿಗೂ ಹೆಚ್ದಾಚಿನ ಮೌಲ್ಖಯ ದಾಖಲೆ ಇಲ್ಲದ ಹಣ ಪತ್ತೆಯಾಗಿತ್ತು. ಸುಮಾರು 40 ನೋಟು ಎಣಿಕೆ ಯಂತ್ರಗಳನ್ನು ಬಳಸಿ ನೋಟು ಎಣಿಕೆ ಮಾಡಲಾಗಿತ್ತು. ಡಿಸೆಂಬರ್‌ 6 ರಂದು ಆರಂಭವಾದ ನೋಟು ಏಣಿಕೆ ಕಾರ್ಯ ಮೂರು ದಿನವಾದರೂ ಮುಗಿದಿರಲಿಲ್ಲ.

ಕಾಂಗ್ರೆಸ್‌ ನಾಯಕ ಧೀರಜ್‌ ಸಾಹು ಅವರು ಮದ್ಯ ತಯಾರಿಕಾ ಕಂಪನಿ ಬಲದೇವ್‌ ಸಾಹು ಅಂಡ್‌ ಗ್ರೂಪ್‌ ಕಂಪನಿಗಳೊಂದಿಗೆ ಸಂಬಂಧ ಹೊದ್ದಿದ್ದಾರೆ ಎನ್ನಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ