Mysore
28
few clouds

Social Media

ಮಂಗಳವಾರ, 10 ಮಾರ್ಚ್ 2026
Light
Dark

ಬಾಂಬ್‌ ಬೆದರಿಕೆ ಹಾಕಲು ಸರ್ಕಾರದ ದುರ್ಬಲ ನಾಯಕತ್ವವೇ ಕಾರಣ : ಗೋವಿಂದ ಕಾರಜೋಳ

ಧಾರವಾಡ : ಬೆಂಗಳೂರಿನ ಶಾಲೆಗಳಿಗೆ ಏಕಕಾಲದಲ್ಲಿ ಬಾಂಬ್‌ ಬೆದರಿಕೆ ಹಾಕಿರುವುದಕ್ಕೆ ರಾಜ್ಯ ಸರ್ಕಾರದ ದುರ್ಬಲ ನಾಯಕತ್ವವೇ ಕಾರಣ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪ ಮಾಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇದು ಜನರಲ್ಲಿ ಭಯದ ವಾತವಾರಣ ಸೃಷ್ಟಿಸಿ ಆಡಳಿತ ಮಾಡುವ ಹುನ್ನಾರ. ಯಾವುದೇ ಕಾರಣಕ್ಕೂ ಈ ರೀತಿಯ ಕೃತ್ಯಕ್ಕೆ ಕೈ ಹಾಕುವ ದೇಶದ್ರೋಹಿಗಳನ್ನು ಸುಮ್ಮನೆ ಬಿಡಬಾರದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಸರ್ಕಾರ ಈಗಾಗಲೇ ಆರೋಪಿಗಳನ್ನು ಬಂಧಿಸಬೇಕಿತ್ತು. ಈ ಸರ್ಕಾರ ಆಡಳಿತದಲ್ಲಿ ಹಿಡಿತವಿಲ್ಲದೆ ನಡೆಯುತ್ತಿದೆ ಎಂದು ಕಿಡಿ ಕಾರಿದ್ದಾರೆ.

ನೆನ್ನೆ ಬೆಳಗ್ಗೆ 7 ಗಂಟೆಯ ಸುಮಾರಿಗೆ ಬೆಂಗಳೂರಿನ ಬಸವೇಶ್ವರ ನಗರ ಹಾಗೂ ಯಲಹಂಕ ಸೇರಿದಂತೆ ವಿವಿಧ ಸ್ಥಳಗಳ ಒಟ್ಟು 15ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಇ-ಮೇಲ್‌ ಕಳುಹಿಸಲಾಗಿತ್ತು ವಿಚಾರ ತಿಳಿದು ಆತಂಕಗೊಂಡ ಪೋಷಕರು ಮಕ್ಕಳನ್ನು ಶಾಲೆಯಿಂದ ವಾಪಸ್‌ ಕರೆದುಕೊಂಡು ಹೋಗಲು ಶಾಲೆಗಳ ಮುಂದೆ ಜಮಾಯಿಸಿದ್ದರು.

ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿನ 30ಕ್ಕೂ ಹೆಚ್ಚು ಶಾಲೆಗಳಿಗೆ ಈ-ಮಮೇಲ್‌ ಮೂಲಕ ಬೆದರಿಕೆ ಕರೆ ಮಾಡಲಾಗಿತ್ತು. ಆದರೇ ಇಲ್ಲಿವರೆಗೆ ಆ ಕರೆ ಮಾಡಿದ ವ್ಯಕ್ತಿ ಯಾರು ಎಂದು ಇಂದಿಗೂ ತಿಳಿದು ಬಂದಿಲ್ಲ.

ಬೆದರಿಕೆ ಮೇಲ್‌ ಬಗ್ಗೆ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌, ಇದೆಲ್ಲಾ ಹುಸಿ ಕರೆಗಳು. ಯಾರು ಯಾವುದೇ ಆತಂಕ ಪಡಬೇಕಾಗಿಲ್ಲ. ಪೊಲೀಸರು ಸೂಕ್ತ ತನಿಖೆ ಮಾಡುತ್ತಿದ್ದಾರೆ ಎಂದಿದ್ದರು.

ಬೆದರಿಕೆ ಬಂದ ಶಾಲೆಗಳಿಗೆ ಪೊಲೀಸ್‌ ಸಿಬ್ಬಂಧಿ ಹಾಗೂ ಬಾಂಬ್‌ ಸ್ಕ್ವಾಡ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವರೆಗೂ ಆರೋಪಿಗಳ ಪತ್ತೆಯಾಗಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!