ನವದೆಹಲಿ: ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲು ಒಲಂಪಿಕ್ ಪದಕ ತಂದುಕೊಟ್ಟ ಹಾಗೂ ಕಾಂಗ್ರೆಸ್ ನಾಯಕನಾಗಿದ್ದ ವಿಜೇಂದರ್ ಸಿಂಗ್ ಇಂದು ( ಏಪ್ರಿಲ್ 3) ಬಿಜೆಪಿ ಸೇರಿದ್ದಾರೆ.
ವಿಜೇಂದರ್ ಸಿಂಗ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಮಥುರ ಕ್ಷೇತ್ರದ ಹಾಲಿ ಸಂಸದೆ ಮತ್ತು ನಟಿ ಹೇಮಾ ಮಾಲಿನಿ ವಿರುದ್ಧ ವಿಜೇಂದರ್ ಸಿಂಗ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜಿಸಿತ್ತು. ಆದರೆ ವಿಜೇಂದರ್ ಸಿಂಗ್ ಅವರು ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಜಾಟ್ ಸಮುದಾಯದ ವಿಜೇಂದರ್ ಸಿಂಗ್ ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದಿವೆ ಮೂಲಗಳು. ವಿಜೇಂದರ್ ಸಿಂಗ್ ಅವರು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದಿದ್ದರು. ಬಳಿಕ 2009ರ ವಿಶ್ವ ಚಾಂಪಿಯನ್ ಶಿಪ್ ಮತ್ತು 2010ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದು ಗಮನ ಸೆಳೆದಿದ್ದರು.