Mysore
15
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ವೈದ್ಯ ವೃತ್ತಿಗೆ ರಾಜೀನಾಮೆ, ಲೋಕಸಭೆಯಲ್ಲಿ ಸ್ಪರ್ಧಿಸಲು ಚಾ.ನಗರಕ್ಕೆ ಬಂದ ಶ್ರೀನಿವಾಸ್‌ ಪ್ರಸಾದ್‌ ಅಳಿಯ!

ಕಳೆದ ವರ್ಷದ ಏಪ್ರಿಲ್‌ 13ರಂದು ವಿ ಶ್ರೀನಿವಾಸ್‌ ಪ್ರಸಾದ್‌ ಅವರು ರಾಜಕೀಯ ನಿವೃತ್ತಿಯನ್ನು ಘೋಷಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಚಾಮರಾಜನಗರದ ಹಾಲಿ ಸಂಸದನಾಗಿರುವ ವಿ ಶ್ರೀನಿವಾಸ್‌ ಪ್ರಸಾದ್‌ ಬದಲು ಈ ಬಾರಿಯ ಲೋಕಸಭೆ ಚುನಾವಣೆಗೆ ಯಾವ ಸ್ಪರ್ಧಿ ಬಿಜೆಪಿಯನ್ನು ಪ್ರತಿನಿಧಿಸಬಹುದು ಎಂದು ಪ್ರಶ್ನೆಯೂ ಸಹ ಎದ್ದಿತ್ತು.

ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀನಿವಾಸ್‌ ಪ್ರಸಾದ್‌ ಅವರ ಅಳಿಯ ಮೋಹನ್‌ ಮಾತನಾಡಿದ್ದು, ತಾವು ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಹೌದು, ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಬೆನ್ನುಹುರಿ ತಜ್ಞನಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮೋಹನ್‌ ಅವರು ಜನರ ಸೇವೆ ಮಾಡಲು ಜನರ ಸೇವೆ ಮಾಡಲು ರಾಜಕೀಯ ಕ್ಷೇತ್ರ, ಇದಕ್ಕಾಗಿ ಜನಪ್ರತಿನಿಧಿಯಾಗಬೇಕೆಂಬ ತೀರ್ಮಾನ ಮಾಡಬೇಕು ಎಂದಿದ್ದಾರೆ. ಇದಕ್ಕಾಗಿ ಬಿಜೆಪಿಯ ಮುಖಂಡರನ್ನೂ ಸಹ ಈಗಾಗಲೇ ಭೇಟಿ ಮಾಡಿ ತನ್ನ ಇಂಗಿತವನ್ನೂ ಸಹ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದ ಮೋಹನ್‌ ಮೀಸಲಾತಿ ಕ್ಷೇತ್ರವಾಗಿರುವ ಚಾಮರಾಜನಗರದಲ್ಲಿ ಕೈಗಾರಿಕೆ ಹಾಗೂ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದು ತನ್ನ ದೂರದೃಷ್ಠಿ ಎಂದು ಹೇಳಿಕೊಂಡರು.

ಇನ್ನು ಇದನ್ನೆಲ್ಲಾ ಪಕ್ಷದ ಮುಖಂಡರ ಜತೆ ಚರ್ಚಿಸಿದ್ದೇನೆ, ಅವರೂ ಸಹ ಇದಕ್ಕೆ ಸಹಮತ ಸೂಚಿಸಿದ್ದಾರೆ, ಅವರೂ ಸಹ ಪ್ರಯತ್ನ ಪಡ್ತಾರೆ, ಜನಗಳ ಅಭಿಪ್ರಾಯ ತೆಗೆದುಕೊಂಡು, ಸೂಕ್ತ ಸಮಯದಲ್ಲಿ ನಿರ್ಧಾರ ಮಾಡಿ ಟಿಕೆಟ್‌ ಕೊಟ್ಟು ಗೆಲ್ಲಿಸುವ ಭರವಸೆಯನ್ನು ಪಕ್ಷ ಕೊಟ್ಟಿದೆ ಎಂದು ಮೋಹನ್‌ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!