Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಾಳೆ ತೆಲಂಗಾಣ ಚುನಾವಣಾ ಅಖಾಡದಲ್ಲಿ ಸಿದ್ದು ಮತ ಬೇಟೆ

ಬೆಂಗಳೂರು : ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯ ಕಾವು ದಿನ ದಿನ ಹೆಚ್ಚುತ್ತಲೇ ಇದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ರಾಜ್ಯದ ಕೈ ನಾಯಕರು ಸತತ ಪ್ರವಾಸ ಕೈಗೊಳ್ಳುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉಸ್ತುವಾರಿಯಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆಲಂಗಾಣದಲ್ಲಿ ಪ್ರಚಾರಕ್ಕೆಂದು ತೆರಳುತ್ತಿದ್ದಾರೆ. ನಾಳೆ ಬೆಂಗಳೂರಿನಿಂದ ಹೈದರಾಬಾದ್ ತೆರಳಲಿರುವ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಕಾಂಗ್ರೆಸ್ ಪರ ಮತಯಾಚಿಸಲಿದ್ದಾರೆ.

ನಾಳೆ ಇಡೀ ದಿನ ತೆಲಂಗಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡಸಲಿದ್ದಾರೆ. ಇದಕ್ಕೂ ಮೊದಲು ಡಿ.ಕೆ ಶಿವಕುಮಾರ್ ಸೇರಿ ನಾಲ್ವರು ರಾಜ್ಯ ನಾಯಕರು ತೆಲಂಗಾಣದಲ್ಲಿ ಪರವಾಸ ಕೈಗೊಂಡಿದ್ದರು. ಜೊತೆಗೆ ತೆಲಂಗಾಣದಲ್ಲೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದಾಗಿ ಭರವಸೆ ನೀಡಿದ್ದರು.

ತೆಲಂಗಾಣದಲ್ಲಿ ಕಾಂಗ್ರೆಸ್ ಮತದಾರರ ಸೆಳೆಯಲು ರಾಜ್ಯದಂತೆ ಗ್ಯಾರಂಟಿ ಯೋಜನೆಗಳ ಘೋಷಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 6 ಗ್ಯಾರಂಟಿಗಳ ಜಾರಿಗೆ ತರುವುದಾಗಿ ಘೋಷಿಸಿದೆ. ಮಹಾಲಕ್ಷ್ಮಿ ,ರೈತ ಭರೋಸಾ, ಗೃಹಜ್ಯೋತಿ, ಇಂದಿರಮ್ಮ ಮನೆ, ಯುವ ವಿಕಾಸಂ ಎಂಬ ಗ್ಯಾರಂಟಿಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ