Mysore
25
clear sky

Social Media

ಮಂಗಳವಾರ, 15 ಏಪ್ರಿಲ 2025
Light
Dark

ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಬಿಗ್‌ ಶಾಕ್: ಎಂಎಲ್‌ಸಿ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ

ಬೆಂಗಳೂರು: ಬಿಜೆಪಿ ಪಕ್ಷದ ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ವಿಧಾನ ಪರಿಷತ್‌ ಸ್ಪೀಕರ್ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ತೇಜಸ್ವಿನಿ ಗೌಡ ಅವರ ಪರಿಷತ್‌ ಸದಸ್ಯ ಸ್ಥಾನದ ಅವಧಿ ಜೂನ್‌ ೨೪ರ ವರೆಗೆ ಇತ್ತು. ಇನ್ನು ತೇಜಸ್ವಿನಿ ಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ತೇಜಸ್ವಿನಿಗೌಡ ಅವರ ರಾಜೀನಾಮೆ ಬಿಜೆಪಿಗೆ ಬಿಗ್‌ ಶಾಕ್‌ ನೀಡಿದಂತಾಗಿದೆ. ಜೊತೆಗೆ ಪಕ್ಷಕ್ಕೆ ನೇರ ಆಘಾತವಾಗಿದೆ.

Tags: