ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಪರವಾಗಿ ಬಿರುಸಿನ ರೋಡ್ ಶೋ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ಹೊರಹಾಕಿದರು.
ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತದ ತೇಜಸ್ವಿ ಸೂರ್ಯ, ಯಾವ ಮುಖ ಇಟ್ಕೊಂಡು ಮತ ಕೇಳುತ್ತಿದ್ದಾರೆ. ಬೆಂಗಳೂರಿನ ಕುಡಿಯುವ ನೀರಿನ ಮೇಕೆದಾಟು ಯೋಜನೆ ಆಗಬೇಕು. ಕೇಂದ್ರದಲ್ಲಿ ಮೇಕುದಾಟುಗೆ ಅನುಮತಿ ಸಿಗಬೇಕಾದ್ರೆ ಸೌಮ್ಯರೆಡ್ಡಿ ಗೆಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಸೌಮ್ಯರೆಡ್ಡಿ ಗೆದ್ದರೆ ನಾನು ಗೆದ್ದಂತೆ. ಭಾವನಾತ್ಮಕವಾಗಿ ಕೇರಳಿ ಮತ ಹಾಕಿಸಿಕೊಂಡು ವಂಚಿಸುವವರು ನಾವಲ್ಲ. ನಿಮ್ಮ ಭಾವನೆಗಳನ್ನು ಗೌರವಿಸಿ, ಬದುಕಿನ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದೇವೆ. ಭಾವನೆಗಳನ್ನು ಕೆರಳಿಸುವವರನ್ನು ದೂರವಿಡಿ. ಭಾವನಾತ್ಮಕವಾಗಿ ಕೆರಳಿ ಮತ ಹಾಕಿದಕ್ಕೆ ಹತ್ತು ವರ್ಷದಲ್ಲಿ ದೇಶಕ್ಕೆ ಮತ್ತು ನಿಮಗೆ ಸಿಕ್ಕಿದ್ದೇನೆ ಎಂದು ಪ್ರಶ್ನಿಸಿದರು