Mysore
24
scattered clouds

Social Media

ಮಂಗಳವಾರ, 01 ಏಪ್ರಿಲ 2025
Light
Dark

ʼಡಿಕೆಶಿʼ ವಿರುದ್ಧ ʼಹೆಚ್‌ಡಿಡಿʼ ಗಂಭೀರ ಆರೋಪ !

ಚಿಕ್ಕಮಗಳೂರು : ಡಿಕೆಶಿ ಮಹಿಳೆಯನ್ನು ಅಪಹರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಆ ಘಟನೆ ನಡೆದದ್ದು 1996-97 ರಲ್ಲಿ, ಅದರ ದಾಖಲೆಗಳಿವೆ ಎಂದು ನಿನ್ನೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಡಿ ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಇದೀಗ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕೂಡ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು,9 ವರ್ಷದ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿ, ಕೂಡಿ ಹಾಕಿ ಆಸ್ತಿ ಬರೆಸಿಕೊಂಡಿದ್ದಾರೆ.ನನ್ನ ಬಳಿ ಎಲ್ಲಾ ದಾಖಲೆಗಳಿವೆ ಎಂದು ಗಂಭಿರ ಆರೋಪ ಮಾಡಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ದೇವೇಗೌಡರು ಡಿಸೈನ್ ಡಿಕೆ ಶಿವಕುಮಾರ್ ವಿರುದ್ಧ ಈ ರೀತಿ ಗಂಭೀರ ಆರೋಪ ಮಾಡಿದರು. 9 ವರ್ಷದ ಬಾಲಕಿಯನ್ನ ಕರೆದೋಯ್ದು ಆಸ್ತಿ ಬರೆಸಿಕೊಂಡಿದ್ದಾರೆ.ನನ್ನ ಬಳಿ ಎಲ್ಲಾ ದಾಖಲೆಗಳಿವೆ.ಸುಪ್ರೀಂ ಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಗೆ ಮುಖಭಂಗವಾಗುತ್ತದೆ. ಅಮೇರಿಕಾದಿಂದ ಹಣ ತಂದಿದ್ದ ವ್ಯಕ್ತಿಗೆ ಆಸ್ತಿ ಬರೆಸಿದರು ಎಂದು ಗಂಭಿರ ಆರೋಪ ಮಾಡಿದರು.

ಅವರು ಐಟಿ ಕಂಪನಿ ಸ್ಥಾಪನೆ ಮಾಡಲು ಹೊರಟಿದ್ದರು.ಅದರ ಹಿಂದಿನ ದಿನ ಸ್ಟಾಪ್ ಪೇಪರ್ ತಂದು ನಕಲಿ ಕ್ರಯ ಮಾಡಿದರು. 9 ವರ್ಷದ ಬಾಲಕಿ ಕೂಡಿಹಾಕಿ ಆಸ್ತಿಯನ್ನು ಬರೆಸಿಕೊಂಡರು.ಬಾಲಕಿಯನ್ನ ಗಂಗಯ್ಯ ತಿಮ್ಮಯ್ಯ ಎಂಬುವರ ಮನೆ ಪಕ್ಕದಲ್ಲಿಟ್ಟಿದ್ದರು.ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿ 9 ದಿನ ಕೂಡಿ ಹಾಕಿದ್ದರು.ನಿನ್ನ ಮಗಳು ಬೇಕು ಎಂದರೆ ಆಸ್ತಿ ಬರೆದುಕೊಡು ಬಾಲಕಿ ತಾಯಿಯನ್ನು ಬೆದರಿಸಿ ಆಸ್ತಿ ಬರೆಸಿಕೊಂಡಿದ್ದರು.ಎಲ್ಲಾ ದಾಖಲೆಗಳು ನನ್ನ ಬಳಿ ಇವೆ ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿ ದೇವೇಗೌಡ ಇದೀಗ ಗಂಭೀರ ಆರೋಪ ಮಾಡಿದ್ದಾರೆ.

Tags: