Mysore
20
overcast clouds
Light
Dark

ಎಚ್‌ಡಿಕೆ ಟ್ವೀಟ್ ಗೆ ಉತ್ತರಿಸುವ ಅಗತ್ಯ ಇಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಹರಿಹಾಯ್ದಿದ್ದಾರೆ. ಇನ್ನು ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸಿಎಂ
ಸಿದ್ದರಾಮಯ್ಯನವರು, ಕುಮಾರಸ್ವಾಮಿಯವರು ನೂರು ಬಾರಿ ಟ್ವೀಟ್ ಮಾಡಿದರೂ ಅವುಗಳಿಗೆ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಕುಮಾರಸ್ವಾಮಿಯವರು ತಮ್ಮ ವಿರುದ್ಧ ಮಾಡಿರುವ ಸರಣಿ ಟ್ವೀಟ್ ಗಳ ಬಗ್ಗೆ ಮಾತನಾಡಿದ ಅವರು, ಅವರ ಸರ್ಕಾರದ ಅವಧಿಯಲ್ಲಿ ಮಾಡುತ್ತಿದ್ದ ವರ್ಗಾವಣೆ ಹಾಗೂ ಹಣದ ವ್ಯವಹಾರವನ್ನು ಈಗ ಹೇಳುತ್ತಿದ್ದಾರೆ. ನಾನು ಈ ಮೊದಲೇ ಹೇಳಿದಂತೆ ಈಗಲೂ ಹೇಳುತ್ತಿದ್ದೇನೆ. ಹಣ ತೆಗೆದುಕೊಂಡು ವರ್ಗಾವಣೆ ಮಾಡಿಸಿದ್ದರೆ. ನನ್ನ ರಾಜಕೀಯ ಜೀವನದಿಂದ ನಿವೃತ್ತಿ ಹೊಂದುತ್ತೇನೆ. ಕುಮಾರಸ್ವಾಮಿಯವರು ನೂರು ಟ್ವೀಟ್ ಮಾಡಿದರು ಅದಕ್ಕೆ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್‌ಡಿಕೆ ಅವರ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಹರಿಹಾಯ್ದಿದ್ದರು.

ತಮ್ಮ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರಿಗೆ ನಿಮ್ಮ ಅಧಿಕಾರದ ಅಂಟುರೋಗಕ್ಕೆ ಮದ್ದೇನು? ಎಂದು ಪ್ರಶ್ನಿಸಿದ್ದರು. ನಿಮಗಾಗಿರುವ ಧನದಹದ ಜಾಡ್ಯಕ್ಕೆ ಚಿಕಿತ್ಸೆ ಪಡೆಯಬಾರದೆ ? ಮಾನಸಿಕ ಸ್ವಾಸ್ತ್ಯಕ್ಕಿಂತ ಇದು ಮಾರಕ ಮನೋರೋಗವಲ್ಲವೇ ? ಮುಖ್ಯಮಂತ್ರಿಯೇ ಇಂಥ ವಿನಾಶಕಾರಿ ಖಾಯಿಲೆಗೆ ತುತ್ತಾದರೆ ನಾಡಿನ ಪಾಡೇನು ? ತುರ್ತು ಚಿಕಿತ್ಸೆ ನಿಮಗೆ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದರು.

ಇನ್ನು ಪೆನ್ ಡ್ರೈವ್ ವಿಚಾರವಾಗಿ ಟ್ವೀಟ್ ಮಾಡಿದ್ದ ಎಚ್‌ಡಿಕೆ, ಪೆನ್ ಡ್ರೈವ್ ಕಳೆದಿಲ್ಲ, ಅದನ್ನು ತೋರಿಸಿದೊಡನೆ ನನ್ನ ಬಳಿಗೆ ಓಡಿ ಬಂದವರ ಪಟ್ಟಿಯನ್ನು ಕೊಡಲೇ ಸಿಎಂ ಸಾಹೇಬರೇ, ಸಿಂಹ ಸಿಂಗಲ್ ಆಗಿ ಬೇಟೆ ಆಡುತ್ತದೆ. ___ ಗುಂಪಾಗಿ ಬರುತ್ತವೆ. ಬಿಟ್ಟ ಸ್ಥಳ ಭರ್ತಿ ಮಾಡಿಸುವ ಕೆಲಸ ನನ್ನಿಂದ ನೀವು ಮಾಡಿಸುವುದಿಲ್ಲ. ಎಂದು ನಂಬಿದ್ದೇನೆ ಎಂದು ಕೌಂಟರ್ ಕೊಟ್ಟಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ