Mysore
14
few clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮೇ ಬಳಿಕ ರಾಜ್ಯ ಸರ್ಕಾರ ಪಥನ ಆಗೋದು ಗ್ಯಾರಂಟಿ : ಎಚ್‌ಡಿಕೆ

ಮಂಡ್ಯ : ಕಾಂಗ್ರೆಸ್‌ ಸರ್ಕಾರ ಐದು ವರ್ಷಗಳ ಕಾಲ ಇರೋದಿಲ್ಲ. ಮೇ ಬಳಿಕ ರಾಜ್ಯ ಸರ್ಕಾರ ಪಥನವಾಗುವುದು ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ತಾಲೂಕಿನ ಬೆಳತೂರು ಗ್ರಾಮದಲ್ಲಿ ದೇವಸ್ಥಾನವೊಂದರ ಜೀರ್ಣೋದ್ಧಾರ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಮಾತನಾಡಿರುವ ಕುಮಾರಸ್ವಾಮಿ ಅವರು ನಾನು ಜನರ ಧ್ವನಿಯಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಐದು ವರ್ಷಗಳ ಕಾಲ ಇರುವುದಿಲ್ಲ ಮೇ ತಿಂಗಳ ಬಳಿಕ ಕೈ ಸರ್ಕಾರ ಉರುಳಿ ಬೀಳುವುದು ಗ್ಯಾರಂಟಿ. ಯಾವುದೇ ಕಾರಣಕ್ಕೂ ಈ ಸರ್ಕಾರ ಉಳಿಯೋದಿಲ್ಲ. ಕೆ.ಆರ್‌ ಪೇಟೆ ಶಾಸಕರು ಗೆದ್ದು ಮೂರು ತಿಂಗಳಾದರೂ ಕೂಡ ಕೆಲಸ ಮಾಡಿಲ್ಲ ಎಂದುಕೊಳ್ಳಬೇಡಿ. ನೀವು ಅವರನ್ನು ಒಳ್ಳೆಯವರು ಎಂದು ಗೆಲ್ಲಿಸಿದ್ದೀರಿ. ನೀವು ಅವರ ಮೇಲೆ ಇಟ್ಟಿರುವಷ್ಟೇ ಪ್ರೀತಿಯನ್ನು ಮಂಜಣ್ಣ ಕೂಡ ಇಟ್ಟುಕೊಂಡಿದ್ದಾರೆ. ನಿಮ್ಮ ಕೆಲಸಗಳನ್ನು ಶಾಸಕರ ಜೊತೆ ನಿಂತು ಮಾಡಿಸುವ ಜವಬ್ದಾರಿ ನನ್ನ ಮೇಲಿದೆ. ಐದಾರು ತಿಂಗಳು ಶಾಸಕರಿಗೆ ಸಮಯ ಕೊಡಿ ಎಂದು ಹೇಳಿದ್ದಾರೆ.
ಇನ್ನು ಜೆಡಿಎಸ್‌ ಶಾಸಕ ಮಂಜು ಅವರು ಮಾತನಾಡಿದ್ದು, ನಮ್ಮ ತಾಲೂಕು ಅಭಿವೃದ್ಧಿ ಆಗಬೇಕಾದರೆ ಕುಮಾರಣ್ಣನಿಗೆ ಅವಕಾಶ ಸಿಗಬೇಕು. ಅವರಿಂದ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಹಿಂದಿನ ಶಾಸಕರು ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದು ವರ್ಷಗಳ ಕಾಲ ಅನುದಾನವನ್ನು ಗುದ್ದಲಿ ಪೂಜೆ ಮಾಡಿಕೊಂಡೇ ಕಳೆದಿದ್ದಾರೆ. ಕುಮಾರಸ್ವಾಮಿಯವರಿಗೆ ಮತ್ತೆ ಅವಕಾಶ ಸಿಗುವ ಸಾಧ್ಯತೆ ಇದೆ. ಇದಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ಹಿಂದೆ ಪಂಚರತ್ನ ಯೋಜನೆ ಜಾರಿಗೆ ಅವಕಾಶ ಸಿಗಲಿಲ್ಲ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!