ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಹಲವೆಡೆ ಅಭ್ಯರ್ಥಿಗಳ ಪ್ರಚಾರ ಕಾರ್ಯಗಳು ಜೋರಾಗಿವೆ. ಇನ್ನು ಈ ಬಾರಿಯೂ ಅಧಿಕಾರದ ಚುಕ್ಕಾಣಿ ಹಿಡಿಯುವ ಯೋಜನೆಯಲ್ಲಿರುವ ಬಿಜೆಪಿ ಹಂತ ಹಂತವಾಗಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸುತ್ತಿದೆ.
ಇಂದು ( ಏಪ್ರಿಲ್ 10 ) ತನ್ನ ಹತ್ತನೇ ಪಟ್ಟಿಯನ್ನು ಪ್ರಕಟಿಸಿರುವ ಬಿಜೆಪಿ 8 ಅಭ್ಯರ್ಥಿಗಳನ್ನು ಹೆಸರಿಸಿದೆ. ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಿಂದ ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದೆ. ಉತ್ತರ ಪ್ರದೇಶದ ಮೈನ್‌ಪುರಿ ಕ್ಷೇತ್ರದಿಂದ ಜೈವೀರ್ ಸಿಂಗ್ ಠಾಕೂರ್, ಕೌಶಂಬಿಯಿಂದ ವಿನೋದ್ ಸೋಂಕರ್, ಫಲ್‌ಪುರದಿಂದ ಪ್ರವೀಣ್ ಪಟೇಲ್, ಅಲಹಾಬಾದ್‌ನಿಂದ ನೀರಜ್ ತ್ರಿಪಾಠಿ, ಬಲ್ಲಿಯಾದಿಂದ ನೀರಜ್ ಶೇಖರ್, ಮಚ್ಲಿಶಹರ್‌ನಿಂದ ಬಿಪಿ ಸರೋಜ್ ಮತ್ತು ಗಾಜಿಪುರದಿಂದ ಪರಸ್ ನಾಥ್ ರೈ ಅವರಿಗೆ ಟಿಕೆಟ್ ನೀಡಲಾಗಿದೆ.





