Mysore
24
few clouds

Social Media

ಬುಧವಾರ, 16 ಏಪ್ರಿಲ 2025
Light
Dark

ಕಾಂಗ್ರೆಸ್‌ಗೆ 1700 ಕೋಟಿ ಐಟಿ ಡಿಮ್ಯಾಂಡ್‌ ನೋಟಿಸ್‌: ವರದಿ

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್‌ ಪಕ್ಷಕ್ಕೆ 1700 ಕೋಟಿ ರೂಪಾಯಿ ಮೊತ್ತದ ಡಿಮ್ಯಾಂಡ್‌ ನೋಟಿಸ್‌ ನೀಡಿದೆ ಎಂದು ಸುದ್ದಿಸಂಸ್ಥೆ ʼಎಎನ್‌ಐʼ ವರದಿ ಮಾಡಿದೆ.

2017-18ರಿಂದ 2020-21 ವರ್ಷಗಳವರೆಗಿನ ಬಾಕಿ ಉಳಿದಿರುವ ತೆರಿಗೆ ಹಣ, ಅದಕ್ಕೆ ಬಡ್ಡಿ ಹಾಗೂ ದಂಡ ಸೇರಿ ಒಟ್ಟು 1700 ಕೋಟಿ ಬರಬೇಕಿದೆ ಎಂದು ಐಟಿ ಇಲಾಖೆ ಈ ನೋಟಿಸ್‌ನಲ್ಲಿ ತಿಳಿಸಿದೆ. ಟ್ಯಾಕ್ಸ್‌ ನೋಟಿಸ್‌ಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ( ಮಾರ್ಚ್‌ 28 ) ದೆಹಲಿ ಹೈಕೋರ್ಟ್‌ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಆದಾಯ ಇಲಾಖೆ ಕಾಂಗ್ರೆಸ್‌ಗೆ ಹೊಸ ನೋಟಿಸ್‌ ನೀಡಿದೆ.

Tags: