Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮತದಾರರನ್ನು ಬಲಿ ಹಾಕಲು ಗ್ಯಾರಂಟಿ ನೀಡಲಾಗುತ್ತಿದೆ: ಜಗ್ಗೇಶ್‌

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲೆಡೆ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಕಣಕ್ಕಿಳಿದಿದ್ದು, ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಪ್ರಚಾರದಲ್ಲಿ ಸಿನಿ ಕಲಾವಿದ ಹಾಗೂ ರಾಜ್ಯಸಭಾ ಸದಸ್ಯನಾಗಿರುವ ಜಗ್ಗೇಶ್‌ ಸಹ ಭಾಗವಹಿಸಿ ಮಾತನಾಡಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಕಿಡಿಕಾರಿದರು. ʼಕುರಿ ಬಲಿ ಕೊಡುವ ಮೊದಲು ಮೆರವಣಿಗೆ ಮಾಡ್ತಾರೆ. ಹರಕೆ ಕುರಿಗೆ ಹಾರ ಹಾಕಿ ಮೆರವಣಿಗೆ ಮಾಡಲಾಗುತ್ತದೆ. ಈ ಹಾರಗಳೇ ಗ್ಯಾರಂಟಿಗಳು. ಮತದಾರರನ್ನು ಬಲಿ ಹಾಕಲು ಗ್ಯಾರಂಟಿಗಳನ್ನು ನೀಡಲಾಗಿದೆ. ಎಷ್ಟೇ ಫ್ರೀ ಸ್ಕೀಮ್‌ ಕೊಟ್ಟರೂ ಮೋದಿ ಗ್ಯಾರಂಟಿ ಶಾಶ್ವತ. ಫ್ರೀಬೀಸ್‌ ಇಸ್ಕೊಂಡ್ರೆ ಸ್ವಾಭಿಮಾನ ಮಾರಿಕೊಂಡಂತೆʼ ಎಂದು ಜಗ್ಗೇಶ್‌ ಹೇಳಿಕೆ ನೀಡಿದರು.

Tags: