ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲೆಡೆ ಅಭ್ಯರ್ಥಿಗಳ ಪರ ನಾಯಕರು ಪ್ರಚಾರವನ್ನು ಆರಂಭಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್ ರಕ್ಷಾ ರಾಮಯ್ಯ ಅವರನ್ನು ಗೆಲ್ಲಿಸಿ, ಈ ಬಾರಿ ಬಿಜೆಪಿಗೆ ಮತ ಹಾಕಿದ್ರೆ ಫ್ರೀ ಬಸ್ ನಿಲ್ಲಿಸಿಬಿಡ್ತಾರೆ ಎಂದು ಹೇಳಿದರು.
ʼಯುವಕರು ಬರಬೇಕು. ಶರತ್ ಬಚ್ಚೇಗೌಡ ಅವರು ಬಂದಿರೋದಕ್ಕೆ ಅಭಿವೃದ್ಧಿ ಆಗ್ತಿದೆ. ಶರತ್ ಬಚ್ಚೇಗೌಡ ಅವರಿಗೆ ಜಯವಾಗಲಿ. ನನಗೆ ಹೇಗೆ ಬೆಂಬಲ ನೀಡಿದ್ರೋ ಅದೇ ರೀತಿ ರಕ್ಷಾ ರಾಮಯ್ಯ ಅವರಿಗೂ ಬೆಂಬಲಿಸಿ. ನಮ್ಮ ಸರ್ಕಾರ ಯಶಸ್ವಿಯಾಗಿ ಗ್ಯಾರಂಟಿ ಯೋಜನೆಗಳನ್ನು ನಡೆಸುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಅಕ್ಕಂದ್ರೇ ಕೇಳಿಸಿಕೊಳ್ಳಿ. ನೀವು ಬಿಜೆಪಿಗೆ ವೋಟ್ ಹಾಕಿದ್ರೆ ಗ್ಯಾರಂಟಿ ನಿಲ್ಲಿಸಿಬಿಡ್ತಾರೆ. ನೀವು ಮತ್ತೆ ಬಸ್‌ನಲ್ಲಿ ಟಿಕೆಟ್ ತಗೊಬೇಕಾಗುತ್ತೆ. 2000 ನಿಲ್ಲಿಸಿಬಿಡ್ತಾರೆ. ಕಾಂಗ್ರೆಸ್‌ಗೆ ವೋಟ್ ಹಾಕಿʼ ಎಂದು ಹೇಳಿದರು.