Mysore
17
clear sky

Social Media

ಗುರುವಾರ, 11 ಡಿಸೆಂಬರ್ 2025
Light
Dark

ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರೆ : ಯತ್ನಾಳ್‌ ಬಾಂಬ್‌

ಬೆಳಗಾವಿ : ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಬದಲಾವಣೆಯಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಮತ್ತೆ ಬಾಂಬ್‌ ಸಿಡಿಸಿದ್ದಾರೆ.
ಸುವರ್ಣಸೌಧದ ಬಳಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕ ಭಾಗದವರಿಗೆ ನಾಯಕತ್ವ ನೀಡಿ ನ್ಯಾಯ ಒದಗಿಸುವವರೆಗೂ ನಾನು ಪಕ್ಷದ ಶಾಸಕಾಂಗ ಸಭೆಗೆ ಹೋಗುವುದಿಲ್ಲ. ಉತ್ತರ ಕರ್ನಾಟಕದವರು ದಕ್ಷಿಣ ಕರ್ನಾಟಕದವರ ಗುಲಾಮರಲ್ಲ ಎಂದು ಗರಂ ಆಗಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ತೆಲಂಗಾಣದಲ್ಲಿ ಕುಟುಂಬ ರಾಜಕಾರಣವನ್ನು ಕಿತ್ತೊಗೆದಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಕೊನೆಗಾಣಲಿದೆ. ವಂಶ ರಾಜಕಾರಣವನ್ನು ಕೊನೆಗಾಣಿಸುವುದೇ ನಮ್ಮ ಗುರಿ ಲೊಕಸಭಾ ಚುನವಾಣೆ ಮುಗಿದ ನಂತರ ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಇಬ್ಬರೂ ಕೂಡ ಬದಲಾಗಲಿದ್ದಾರೆ ಎಂದಿದ್ದಾರೆ.

ಇತ್ತೀಚೆಗಷ್ಟೇ ವಿಜಯಪುರದಲ್ಲಿ ನಡೆದ ದಾನಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಷಣ ಮಾಡುವ ವೇಳೆ ಯತ್ನಾಳ್‌ ಅವರು ಈಗ ನಾನೆ ವಿಪಕ್ಷ ನಾಯಕ. ಹೈಕಮಾಂಡ್‌ ನಿಂದ ವಿಪಕ್ಷ ನಾಯಕನ ನೇಮಕವಾಗಿದ್ದರೂ ನಾನೇ ವಿಪಕ್ಷ ನಾಯಕ ಎಂದು ಬಾಂಬ್‌ ಒಂದನ್ನು ಸಿಡಿಸಿದ್ದರು.

ಇನ್ನು ಮುಂದೆ ನಮ್ಮ ದಂಗಲ್‌ ಶುರುವಾಗುತ್ತೆ. ಆಗ ಯಾರು ನಿಜವಾದ ವಿಪಕ್ಷ ನಾಯಕ ಅಂತ ಫಿಕ್ಸ್‌ ಮಾಡ್ತೀವಿ. ಈಗ ನಾನೇ ವಿಪಕ್ಷ ನಾಯಕ. ಬಿಜೆಪಿಯಲ್ಲಿ ವಿಪಕ್ಷ ನಾಯಕನ ಸ್ಥಾನ ಸೇಲ್‌ ಆಗಿದೆಯಾ ? ಯಾರಾದರೂ ಏನಾದರೂ ಕೊಟ್ಟು ತಗೊಂಡು ಮಾಡಿದ್ರೆ ನಾವು ಒಪ್ಪುತ್ತೇವೆ ಎಂದು ಹೇಳಿದ್ದರು.

ಇದೀಗ ಮತ್ತೆ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಬದಲಾವಣೆಯ ಬಗ್ಗೆ ಮಾತನಾಡುವ ಮೂಲಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ರಾಜಕೀಯ ವಲಯದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!