ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ಚುನಾವಣೆಯಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಬುಧವಾರ ದಿಲ್ಲಿಗೆ ಬರುವಂತೆ ಹೇಳಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮಿತ್ ಶಾ ಅವರು ಕರೆ ಮಾಡಿ ಪಕ್ಷದ ಹಿರಿಯರಿದ್ದೀರಿ, ನೀವು ಸ್ಪರ್ಧೆ ಮಾಡುವುದು ಆಶ್ಚರ್ಯ ತಂದಿದೆ ಎಂದರು. ಅದಕ್ಕೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಮೋದಿಯವರು ಕುಟುಂಬ ರಾಜಕಾರಣ ಇಷ್ಟಪಡಲ್ಲ, ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ಉಸ್ತುವಾರಿಯೇ ಒಂದು ಕುಟುಬಂದ ಕೈಯಲ್ಲಿದೆ. ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷ ಹೋಗಿರುವುದು ತುಂಬಾ ಅನ್ಯಾಯ, ಇದರಿಂದ ಪಕ್ಷದ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ ಎಂದು ತಿಳಿಸಿದ್ದೇನೆ ಎಂದರು.
ನಾಳೆಯೇ ಪಕ್ಷದ ರಾಜ್ಯಧ್ಯಕ್ಷರನ್ನು ಬದಲಾವಣೆ ಮಾಡಿ ಚುನಾವಣೆ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದೀನಿ ಎಂದು ಈಶ್ವರಪ್ಪ ಹೇಳಿದರು





