Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಪ್ರಧಾನಿಗೆ ಬೆಳ್ಳಿಯ ರಾಮಂದಿರ ಪ್ರತಿರೂಪ ಉಡುಗೊರೆ ನೀಡಿದ ಯೋಗಿ

ಅಯೋಧ್ಯೆ: ಇಂದು ಅಯೋಧ್ಯೆ ಭವ್ಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದೆ. ಈ ಕಾರ್ಯಕ್ರದ ಯಶಸ್ಸಿನಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಳ್ಳಿಯ ರಾಮಮಂದಿರ ಪ್ರತಿರೂಪವನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಉಡುಗೊರೆಯಾಗಿ ನೀಡಿ ಗೌರವಿಸಿದರು. ಗೋವಿಂದ್‌ ದೇವ್‌ ಗುರೂಜಿ ಮಹಾರಾಜ್‌ ಅವರು ಪ್ರಧಾನಿಗೆ ಶಾಲು ಹೊದಿಸಿ ಗೌರವಿಸಿದರು.

ಜೊತೆಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೂ ಸಿಎಂ ಯೋಗಿ ಬೆಳ್ಳಿಯ ರಾಮಮಂದಿರ ಉಡುಗೊರೆ ನೀಡಿದರು.

ಪ್ರಾಣಪ್ರತಿಷ್ಠೆ ಸಂಪನ್ನ: ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್‌ಗಳ ಮಧ್ಯೆ ಅಭಿಜಿತ್‌ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ಅರ್ಚಕರು, ಪಂಡಿತರು ಹಾಗೂ ಯಜಮಾನನಾಗಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠಾಪನೆ ನೆರವೇರಿತು.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಸಿಎಂ ಯೋಗಿ ಆದಿತ್ಯನಾಥ್‌, ಗುಜರಾತ್‌ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಮೊದಲಾದವರು ಉಪಸ್ಥಿತರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ