ನವದೆಹಲಿ : ಡಿಸೆಂಬರ್ 13 ರಂದು ಮಧ್ಯಾಹ್ನ 3.30ಕ್ಕೆ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನೂತನ ಮುಕ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿಷ್ಣು ದೇವ್ ಸಾಯಿ ಅವರು ಪ್ರಭಾವಿ ಸಾಹು ಸಮುದಾಯಕ್ಕೆ ಸೇರಿದವರಾಗಿದ್ದು, ಇದು ದುರ್ಗ್, ರಾಯ್ಪುರ ಮತ್ತು ಬಿಲಾಸ್ಪುರ ವಿಭಾಗಗಳಲ್ಲಿ ಕಂಡುಬರುವ ಸಮುದಾಶಯವಾಗಿದೆ.
ಇನ್ನು ಛತ್ತೀಸ್ಗಢದ ಭಾರತೀಯ ಜನತಾ ಪಕ್ಷ ಸರ್ಕಾರವು ಉಪಮುಖ್ಯಮಂತ್ರಿಯನ್ನ ನೇಮಿಸಬಹುದು ಎಂದು ಹಿರಿಯ ಮುಖಂಡ ರಮಣ್ ಸಿಂಗ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 90 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 54 ಸ್ಥಾನಗಳನ್ನು ಗೆದ್ದು, ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪದಚ್ಯುತಗೊಳಿಸಿತು. 2018 ರಲ್ಲಿ 68 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 35 ಸ್ಥಾನಗಳಿಗೆ ಕುಸಿದಿದೆ.
ಪಕ್ಷದ ರಾಜ್ಯ ಪ್ರಧಾನ ಕಚೇರಿಯಾದ ಕುಶಾಭೌ ಠಾಕ್ರೆ ಪರಿಷರ್ನಲ್ಲಿ ಹೊಸದಾಗಿ ಆಯ್ಕೆಯಾದ 54 ಶಾಸಕರ ಸಭೆಯಲ್ಲಿ ಸಾಯಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಭಾನುವಾರ ಆಯ್ಕೆ ಮಾಡಲಾಯಿತು.