Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ರಾಘವ್ ಚಡ್ಡಾ ಅಮಾನತು ಹಿಂಪಡೆದ ಉಪಾಧ್ಯಕ್ಷ ಜಗದೀಪ್ ಧಂಖರ್!

ನವದೆಹಲಿ : ರಾಜ್ಯಸಭೆಯಿಂದ ಅಮಾನತುಗೊಂಡಿದ್ದ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರ ಅಮಾನತನ್ನು ಉಪಾಧ್ಯಕ್ಷ ಜಗದೀಪ್‌ ಧಂಖರ್‌ ಹಿಂಪಡೆದಿದ್ದಾರೆ.

ದೆಹಲಿಯಲ್ಲಿ ಕೇಂದ್ರೀಯ ಕೇಡರ್ ಅಧಿಕಾರಿಗಳ ಪೋಸ್ಟಿಂಗ್ ಮತ್ತು ವರ್ಗಾವಣೆಯ ವಿಷಯದ ಕುರಿತು ಮಾಡಿದ ಕಾನೂನಿಗೆ ಕೆಲವು ಸದಸ್ಯರಿಗೆ ಬೆಂಬಲ ಪತ್ರವನ್ನು ನೀಡಿದ ನಂತರ ರಾಘವ್ ಚಡ್ಡಾ ಅವರನ್ನು ಆಗಸ್ಟ್ 11ರಂದು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ವಂಚನೆ ಮಾಡುವ ಮೂಲಕ ಸಂಸದರ ಸವಲತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಚಡ್ಡಾ ವಿರುದ್ಧ ಆರೋಪಿಸಲಾಗಿದೆ.

ವಾಸ್ತವವಾಗಿ, ಚಡ್ಡಾ ಅವರು ತಮ್ಮ ಪತ್ರದಲ್ಲಿ ಸಹಿಯನ್ನು ತೋರಿಸಿರುವ ಐವರು ಸಂಸದರು ತಮ್ಮ ಒಪ್ಪಿಗೆಯಿಲ್ಲದೆ ದೆಹಲಿ ಸೇವೆಗಳ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಸ್ತಾವನೆಯನ್ನು ಆಪ್ ಸಂಸದ ರಾಘವ್ ಚಡ್ಡಾ ಮಂಡಿಸಿದ್ದರು. ಈ ಪ್ರಸ್ತಾಪಕ್ಕೆ ಬಿಜೆಪಿಯ ಮೂವರು ಸಂಸದರು ವಿರೋಧ ವ್ಯಕ್ತಪಡಿಸಿದ್ದರು.

ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಇಂದು ರಾಘವ್ ಚಡ್ಡಾ ಅವರ ವಾಪಸಾತಿಗೆ ಉಪಾಧ್ಯಕ್ಷರ ಮುಂದೆ ಪ್ರಸ್ತಾವನೆಯನ್ನು ಮಂಡಿಸಿದ್ದು ಅದರ ಮೇಲೆ ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ಎಎಪಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ರದ್ದುಗೊಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಸದನದಲ್ಲಿ ತನಿಖೆಗೆ ಆದೇಶಿಸುವುದರೊಂದಿಗೆ, ವರದಿ ಬರುವವರೆಗೆ ಚಡ್ಡಾ ಅವರನ್ನು ಅಮಾನತುಗೊಳಿಸಲಾಯಿತು. ರಾಜ್ಯಸಭೆಯಿಂದ ಅಮಾನತುಗೊಂಡ ನಂತರ, ರಾಘವ್ ಚಡ್ಡಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ