Mysore
27
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಮೈಸೂರು – ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್;‌ ಈ ದಿನದವರೆಗೆ ಬುಧವಾರವೂ ಸಂಚಾರ

ವಂದೇ ಭಾರತ್‌ ಭಾರತೀಯ ರೈಲ್ವೆಯ ಇತ್ತೀಚೆಗಿನ ಜನಪ್ರಿಯ ರೈಲುಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುತ್ತಿದೆ. ಇದೀಗ ರೈಲ್ವೆ ಇಲಾಖೆ ಮೈಸೂರು ಹಾಗೂ ಚೆನ್ನೈ ಸೆಂಟ್ರಲ್‌ ನಡುವೆ ಬುಧವಾರವೂ ವಂದೇ ಭಾರತ್‌ ರೈಲನ್ನು ಓಡಿಸುವ ತೀರ್ಮಾನಕ್ಕೆ ಬಂದಿದೆ.

ಹೌದು, ಮೈಸೂರು ಹಾಗೂ ಚೆನ್ನೈ ನಗರಗಳ ನಡುವೆ ಬುಧವಾರ ಹೊರತುಪಡಿಸಿ ವಾರದ ಉಳಿದ ಎಲ್ಲಾ ದಿನಗಳೂ ಸಹ ವಂದೇ ಭಾರತ್‌ ರೈಲು ಸಂಚರಿಸುತ್ತಿತ್ತು. ಇದೀಗ ವರ್ಷಾಂತ್ಯ, ಕ್ರಿಸ್‌ಮಸ್‌ ಹಾಗೂ ಹೊಸವರ್ಷದ ಸಲುವಾಗಿ ಹೆಚ್ಚಿನ ಪ್ರಯಾಣಿಕರು ಸಂಚರಿಸುವುದನ್ನು ಗುರಿಯನ್ನಾಗಿಸಿಕೊಂಡು ನಿನ್ನೆಯಿಂದ ( ನವೆಂಬರ್‌ 29 ) ಡಿಸೆಂಬರ್‌ 27ರವರೆಗೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಮೈಸೂರಿನಿಂದ ಚೆನ್ನೈವರೆಗೆ ಆಯೋಜಿಸಲಾಗಿದೆ. ಈ ರೈಲು ಬೆಂಗಳೂರು ಹಾಗೂ ಕಟಪಾಡಿ ಈ ಎರಡು ನಿಲ್ದಾಣಗಳಲ್ಲಿ ಮಾತ್ರ ನಿಲ್ಲಲಿದೆ.

ಈ ರೈಲು ಚೆನ್ನೈ ಹಾಗೂ ಮೈಸೂರು ನಡುವೆ 06037 ಮತ್ತು ಮೈಸೂರು ಹಾಗೂ ಚೆನ್ನೈ ನಡುವೆ 06038 ಸಂಖ್ಯೆಯನ್ನು ಹೊಂದಿರಲಿದೆ. ಇನ್ನು ಈ ರೈಲು 500 ಕಿಲೋಮೀಟರ್‌ ವೇಗವನ್ನು 6 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಲಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಅತಿವೇಗದ ರೈಲು ಎಂದು ಗುರುತಿಸಿಕೊಂಡಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!