Mysore
22
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಾಮಮಂದಿರದತ್ತ ಹರಿದು ಬಂದ ಜನಸಾಗರ; ಅಯೋಧ್ಯೆ ಬಸ್‌ ಸೇವೆ ಸ್ಥಗಿತ

ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯ ನಡೆದ ನಂತರದ ದಿನದಿಂದ ರಾಮ ಭಕ್ತರಿಗೆ ರಾಮಮಂದಿರ ಪ್ರವೇಶಿಸುವ ಅವಕಾಶ ನೀಡಲಾಗಿದ್ದು, ಜನ ಸಾಗರೋಪಾದಿಯಾಗಿ ರಾಮಮಂದಿರ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.

ಪರಿಣಾಮವಾಗಿ ಅಯೋಧ್ಯೆಯಲ್ಲಿ ನೂಕು ನುಗ್ಗಲು ಉಂಟಾಗಿದೆ. ಮಂಗಳವಾರ ಮುಂಜಾನೆ 3 ಗಂಟೆಯಿಂದಲೇ ಚಳಿಯನ್ನು ಲೆಕ್ಕಿಸದೇ ಭಕ್ತರು ರಾಮನ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಇನ್ನು 7000 ಭದ್ರತಾ ಸಿಬ್ಬಂದಿಗಳು ಇದ್ದರೂ ಸಹ ಭಕ್ತರನ್ನು ನಿಯಂತ್ರಿಸಲು ತೀವ್ರ ಕಷ್ಟ ಉಂಟಾಗಿದ್ದು, ಉತ್ತರಪ್ರದೇಶ ಸರ್ಕಾರ ಪರಿಸ್ಥಿತಿಯನ್ನು ಹತೋಟಿಗೆ ತರಲು ಲಕ್ನೋದಿಂದ ಅಯೋಧ್ಯೆಗೆ ಸಂಚರಿಸುವ ಬಸ್‌ಗಳನ್ನು ತಾತ್ಕಾಲಿಕವಾಗಿ ತಡೆದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ