Mysore
30
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

Union Budget-2024: ಸರ್ಕಾರದ ಆದಾಯ ಮತ್ತು ಖರ್ಚು ಹೇಗೆ? ಇಲ್ಲಿದೆ ನೋಡಿ

ನವದೆಹಲಿ : ಈ ಬಾರಿಯ ಮಧ್ಯಂತರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ಘೋಷಣೆಗಳನ್ನು ಮಾಡಿಲ್ಲ. ಹಿಂದಿನ ವರ್ಷಗಳಲ್ಲಿ ಆಗಿರುವ ಸಾಧನೆ, ಮುಂದಿನ ದಶಕಗಳಲ್ಲಿ ಸರ್ಕಾರ ಇಟ್ಟಿರುವ ಅಭಿವೃದ್ಧಿ ಗುರಿ, ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ದೂರದೃಷ್ಟಿಯ ಯೋಜನೆ ಇತ್ಯಾದಿ ಕಡೆ ಬಜೆಟ್ ಗಮನ ಕೊಟ್ಟಿದೆ.

ಬಜೆಟ್‌ ಮಂಡನೆ ಮತ್ತು ಅದರ ಆದಾಯ ಮತ್ತು ಖರ್ಚು ಹೇಗೆ? ಸರ್ಕಾರದ ಹಣ ಯಾವ್ಯಾವುದಕ್ಕೆ ವ್ಯಯವಾಗುತ್ತದೆ, ಸರ್ಕಾರಕ್ಕೆ ಬರುವ ಆದಾಯ ಎಷ್ಟು, ಅದು ಎಲ್ಲಿಗೆ ಹರಿದುಹೋಗುತ್ತದೆ ಎಂಬಿತ್ಯಾದಿ ವಿವರಗಳು ಇಲ್ಲಿದೆ.

ಸರ್ಕಾರಕ್ಕೆ ಹಣದ ಹರಿವು ಎಲ್ಲೆಲ್ಲಿಂದ?
ಸಾಲಗಳಿಂದ: ಶೇ. 28
ಆದಾಯ ತೆರಿಗೆ: ಶೇ. 19
ಕೇಂದ್ರ ಅಬಕಾರಿ ಸುಂಕ: ಶೇ. 5
ಕಾರ್ಪೊರೇಶನ್ ತೆರಿಗೆ: ಶೇ. 17
ಜಿಎಸ್​ಟಿ ಮತ್ತಿತರ ತೆರಿಗೆ: ಶೇ. 18
ತೆರಿಗೆಯೇತರ ಸ್ವೀಕೃತಿ: ಶೇ. 7
ಸಾಲವಲ್ಲದ ಬಂಡವಾಳ ಸ್ವೀಕೃತಿ: ಶೇ. 1
ಆಮದು ಸುಂಕ ಅಥವಾ ಕಸ್ಟಮ್ಸ್: ಶೇ. 4

ಸರ್ಕಾರದಿಂದ ಹಣದ ವೆಚ್ಚ ಎಲ್ಲಿಗೆ?
ಬಡ್ಡಿ ಪಾವತಿ: ಶೇ. 20
ಕೇಂದ್ರದ ಪ್ರಾಯೋಜಿತ ಯೋಜನೆಗಳು: ಶೇ. 8
ಪಿಂಚಣಿ: ಶೇ. 4
ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆ: ಶೇ. 20
ಹಣಕಾಸು ಆಯೋಗ ಮತ್ತಿತರ ವರ್ಗಾವಣೆ: ಶೇ. 8
ಕೇಂದ್ರ ವಲಯ ಸ್ಕೀಮ್​ಗಳು: ಶೇ. 16
ಸಬ್ಸಿಡಿ: ಶೇ. 6
ರಕ್ಷಣಾ ವಲಯ: ಶೇ. 8

ಯಾವ್ಯಾವ ಇಲಾಖೆಗೆ ಎಷ್ಟು ಹಣ ನಿಯೋಜನೆ
ರಕ್ಷಣಾ ಸಚಿವಾಲಯ: 6.2 ಲಕ್ಷ ಕೋಟಿ ರೂ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ: 2.78 ಲಕ್ಷ ಕೋಟಿ ರೂ
ರೈಲ್ವೆ ಸಚಿವಾಲಯ: 2.55 ಲಕ್ಷ ಕೋಟಿ ರೂ
ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ: 2.13 ಲಕ್ಷ ಕೋಟಿ ರೂ
ಗೃಹ ವ್ಯವಹಾರಗಳ ಸಚಿವಾಲಯ: 2.03 ಲಕ್ಷ ಕೋಟಿ ರೂ
ಗ್ರಾಮೀಣಾಭಿವೃದ್ಧಿ ಸಚಿವಾಲಯ: 1.77 ಲಕ್ಷ ಕೋಟಿ ರೂ
ರಾಸಾಯನಿಕ ಮತ್ತು ರಸಗೊಬ್ಬರ: 1.68 ಲಕ್ಷ ಕೋಟಿ ರೂ
ಸಂವಹನ ಸಚಿವಾಲಯ: 1.37 ಲಕ್ಷ ಕೋಟಿ ರೂ
ಕೃಷಿ ಮತ್ತು ರೈತರ ಕಲ್ಯಾಣ: 1.27 ಲಕ್ಷ ಕೋಟಿ ರೂ

ಪ್ರಮುಖ ಯೋಜನೆಗಳಿಗೆ ಸಿಕ್ಕ ಹಣ
ಮನ್​ರೇಗಾ ಯೋಜನೆ: 60,000 ರಿಂದ 86,000 ಕೋಟಿ ರೂಗೆ ಏರಿಕೆ
ಆಯುಷ್ಮಾನ್ ಭಾರತ್: 7,200 ರಿಂದ 7,500 ಕೋಟಿ ರೂಗೆ ಏರಿಕೆ
ಪಿಎಲ್​ಐ ಸ್ಕೀಮ್: 4,645ರಿಂದ 6,200 ಕೋಟಿ ರೂಗೆ ಏರಿಕೆ
ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಯೋಜನೆ: 3,000ದಿಂದ 6,903 ಕೋಟಿ ರೂಗೆ ಏರಿಕೆ
ಸೌರ ವಿದ್ಯುತ್: 4,970ರಿಂದ 8,500 ಕೋಟಿ ರೂಗೆ ಏರಿಕೆ
ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್: 297ರಿಂದ 600 ಕೋಟಿ ರೂಗೆ ಏರಿಕೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ