Mysore
27
scattered clouds

Social Media

ಭಾನುವಾರ, 10 ನವೆಂಬರ್ 2024
Light
Dark

ಛತ್ತೀಸ್‌ಗಡಕ್ಕೆ ಇಬ್ಬರು ಉಪಮುಖ್ಯಮಂತ್ರಿ: ಜಾತಿ ಸಮತೋಲನಕ್ಕೆ ಬಿಜೆಪಿ ಚಿಂತನೆ

ಭೂಪಾಲ್: ಛತ್ತೀಸ್‌ಗಡದಲ್ಲಿ ಬಿಜೆಪಿಯ ನೂತನ ಬುಡಕಟ್ಟು ಮುಖ್ಯಮಂತ್ರಿ ವಿಷ್ಣು ದಿಯೋ ಸಾಯಿ ಅವರ ಸಂಪುಟ ಇಬ್ಬರು ಡಿಸಿಎಂಗಳನ್ನು ಹೊಂದಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಜಾತಿ ಸಮೀಕರಣವನ್ನು ಸಮತೋಲನಗೊಳಿಸುವ ಬಿಜೆಪಿ ಪಕ್ಷ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

ರಾಜ್ಯ ಬಿಜೆಪಿ ಮುಖ್ಯಸ್ಥ ಹಿಂದುಳಿದ ವರ್ಗಗಳ ನಾಯಕ ಅರುಣ್ ಸಾವೊ, ಮತ್ತು ಬ್ರಾಹ್ಮಣರಾಗಿರುವ ವಿಜಯ್ ಶರ್ಮಾ ಡಿಸಿಎಂ ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿಯ ಸಿಎಂ ಹುದ್ದೆಗೆ ಆಕಾಂಕ್ಷಿಯಾಗಿದ್ದ ರಜಪೂತ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರನ್ನು ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆ ಮಾಡುವ ಬಗ್ಗೆ ಬಿಜೆಪಿಯಲ್ಲಿ ಯೋಜನೆ ನಡೆಸಿದೆ ಎನ್ನಲಾಗಿದೆ.

ರಮಣ್ ಸಿಂಗ್ ಜೊತೆಗೆ, ಅರುಣ್ ಸಾವೊ ಕೂಡ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಬಿಜೆಪಿ ಪಕ್ಷದ ಅಧಿಕಾರ ಹಂಚುವ ಹೊಸ ಸಮೀಕರಣ ಗುಂಪುಗಾರಿಕೆಯನ್ನು ದೂರವಿರಿಸಲು ಸಹಾಯ ಮಾಡುತ್ತದೆ ಎಂಬ ಯೋಜನೆಯಿಂದ ಈ ತೀರ್ಮಾನಕ್ಕೆ ಬರಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ