Mysore
28
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ತ.ನಾಡು ಸರ್ಕಾರ ನೇರಪ್ರಸಾರ ವೀಕ್ಷಣೆ ನಿಷೇಧಿಸಿದೆ ಎಂದು ಆಕ್ರೋಶ ಹೊರಹಾಕಿದ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ( ಜನವರಿ 21 ) ಎಕ್ಸ್‌ ಖಾತೆಯಲ್ಲಿ ತಮಿಳುನಾಡು ಸರ್ಕಾರ ಜನವರಿ 22ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಯನ್ನು ನಿಷೇಧಿಸಿದೆ ಎಂದು ಆರೋಪಿಸಿ ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ತಮಿಳು ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯೊಂದರ ಫೋಟೊ ಹಂಚಿಕೊಳ್ಳುವ ಮೂಲಕ ನಿರ್ಮಲಾ ಸೀತಾರಾಮನ್‌ ಈ ರೀತಿ ಟ್ವೀಟ್‌ ಮಾಡಿದ್ದಾರೆ.

ತಮಿಳುನಾಡಿನಲ್ಲಿ 200ಕ್ಕೂ ಅಧಿಕ ರಾಮನ ದೇವಾಲಯಗಳಿವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿರ್ವಹಿಸುವ ದೇವಾಲಯಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ಯಾವುದೇ ಪೂಜೆ, ಭಜನೆ ಅಥವಾ ಅನ್ನದಾನವನ್ನು ಮಾಡಲು ಅನುಮತಿ ನೀಡಿಲ್ಲ. ಖಾಸಗಿ ದೇವಾಲಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನೂ ಸಹ ಪೊಲೀಸರು ತಡೆಯುತ್ತಿದ್ದಾರೆ. ಆಯೋಜಕರಿಗೆ ನಿಮ್ಮ ಪಂಗಡಗಳನ್ನು ಕಿತ್ತುಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇಂತಹ ದ್ವೇಷಪೂರಿತ ಹಿಂದೂ ವಿರೋಧಿ ಕ್ರಮವನ್ನು ಖಂಡಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್‌ ಬರೆದುಕೊಂಡಿದ್ದಾರೆ.

ಭಜನೆ ಆಯೋಜಿಸಿದ್ದಕ್ಕೆ, ಬಡವರಿಗೆ ಆಹಾರ ನೀಡಿದ್ದಕ್ಕೆ, ಸಿಹಿ ಹಂಚಿ ಸಂಭ್ರಮಿಸುವುದಕ್ಕೆ, ಅಯೋಧ್ಯೆಯಲ್ಲಿ ಮೋದಿ ಅವರನ್ನು ನೋಡುವುದಕ್ಕೂ ಬೆದರಿಕೆ ಹಾಕುತ್ತಿದ್ದಾರೆ. ಕೇಬಲ್‌ ಟಿವಿ ಆಪರೇಟರ್‌ಗಳು ನೇರಪ್ರಸಾರದ ಸಮಯದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಬಹುದು ಎಂದು ಹೇಳುತ್ತಿದ್ದಾರೆ. ಇದು ʼಇಂಡಿಯಾʼ ಮೈತ್ರಿಕೂಟದ ಡಿಎಂಕೆಯ ಹಿಂದೂ ವಿರೋಧಿ ಪ್ರಯತ್ನ ಎಂದೂ ಸಹ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!