Mysore
19
scattered clouds

Social Media

ಶನಿವಾರ, 31 ಜನವರಿ 2026
Light
Dark

ತಿರುಮಲ ತಿರುಪತಿ ವೆಬ್‌ಸೈಟ್‌ ಹೆಸರು ಬದಲಾವಣೆ!

ತಿರುಮಲ : ತಿರುಮಲ ತಿರುಪತಿ ದೇವಸ್ಥಾನದ ವಿವರಗಳನ್ನ ನೀಡುವ ಅಧಿಕೃತ ವೆಬ್ಸೈಟ್ನ ಹೆಸರನ್ನ ಮತ್ತೊಮ್ಮೆ ಬದಲಾಯಿಸಲಾಗಿದೆ.

ಈ ಹಿಂದೆ tirupatibalaji.ap.gov.in ಇದ್ದ ಟಿಟಿಡಿ ವೆಬ್ಸೈಟ್ನ ಹೆಸರನ್ನು ಈಗ ttdevasthanams.ap.gov.in ಎಂದು ಬದಲಾಯಿಸಲಾಗಿದೆ.

ಇದನ್ನು ಗಮನಿಸುವಂತೆ ಟಿಟಿಡಿ, ಭಕ್ತರಿಗೆ ಮನವಿ ಮಾಡಿದೆ. ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ತಿರುಪತಿ ಮತ್ತು ಇತರ ಸ್ಥಳಗಳಲ್ಲಿನ ಟಿಟಿಡಿ ಸಂಯೋಜಿತ ದೇವಾಲಯಗಳೊಂದಿಗೆ ಹಿಂದೂ ಧರ್ಮವನ್ನ ಜನಪ್ರಿಯಗೊಳಿಸುವ ಉದ್ದೇಶದಿಂದ ಎಲ್ಲಾ ವಿವರಗಳೊಂದಿಗೆ ಹೊಸ ವೆಬ್ಸೈಟ್ ttdevasthanams.ap.gov.in ಪ್ರಾರಂಭಿಸಿದರು.

‘ಒಂದು ಸಂಸ್ಥೆ, ಒಂದು ವೆಬ್ಸೈಟ್, ಒಂದು ಮೊಬೈಲ್ ಅಪ್ಲಿಕೇಶನ್’ ಭಾಗವಾಗಿ ದೇವಾಲಯದ ಅಧಿಕೃತ ವೆಬ್ಸೈಟ್ನ ಹೆಸರು ಬದಲಾಯಿಸಲಾಗಿದೆ. ಇನ್ನು ಮುಂದೆ ಭಕ್ತರು ttdevasthanams.ap.gov.in ವೆಬ್ಸೈಟ್ ಮೂಲಕ ಆನ್ಲೈನ್ ಬುಕಿಂಗ್ ಮಾಡಲು ಸೂಚಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!