Mysore
14
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಚೀನಾ ಸೈನಿಕರನ್ನು ಎದುರಿಸಿದ ಕುರಿಗಾಹಿಗಳು!

ಲಡಾಖ್‌ :  ನಿಯಂತ್ರಣ ರೇಖೆ ಬಳಿ ಕುರಿಗಳನ್ನು ಮೇಯಿಸುವುದನ್ನು ತಡೆಯಲು ಪ್ರಯತ್ನಿಸಿದ ಚೀನಾದ ಸೈನಿಕರಿಗೆ ಲಡಾಖ್ ನ ಕುರಿ ಕಾಯುವವರ ಗುಂಪು ಧೈರ್ಯದಿಂದ ಎದುರಿಸಿದ ವಿಡಿಯೋ ವೈರಲ್‌ ಆಗಿದೆ.

2020 ರ ಗಾಲ್ವಾನ್ ಘರ್ಷಣೆಯ ನಂತರ ಸ್ಥಳೀಯರು ಈ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುವುದನ್ನು ನಿಲ್ಲಿಸಿದ್ದರು.

ಅವರು ಪಿಎಲ್‌ಎ ಪಡೆಗಳೊಂದಿಗೆ ವಾದಿಸುವ ಮತ್ತು ಅವರು ಭಾರತೀಯ ಭೂಪ್ರದೇಶದಲ್ಲಿದ್ದಾರೆ ಎಂದು ಪ್ರತಿಪಾದಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನು ಗೆದ್ದಿದೆ.

ಕಳೆದ ಮೂರು ವರ್ಷಗಳಿಂದ, ಪೂರ್ವ ಲಡಾಖ್ನ ಅಲೆಮಾರಿಗಳು ಎಲ್‌ಎಸಿ ಬಳಿಯ ಹಲವಾರು ಪ್ರದೇಶಗಳಲ್ಲಿ ಪ್ರಾಣಿಗಳನ್ನು ಮೇಯಿಸುವುದನ್ನು ನಿಲ್ಲಿಸಿದ್ದರು. ಇದೇ ಮೊದಲ ಬಾರಿಗೆ ಅವರು ಈ ಪ್ರದೇಶದಲ್ಲಿ ತಮ್ಮ ಮೇವಿನ ಹಕ್ಕುಗಳನ್ನು ಪ್ರತಿಪಾದಿಸಿದ್ದಾರೆ ಮತ್ತು ಪಿಎಲ್‌ಎ ಸೈನಿಕರನ್ನು ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!