ನವದೆಹಲಿ: ಪಾಕಿಸ್ಥಾನ ಸೇನಾಧಿಕಾರಿಯೊಬ್ಬ ಭಾರತವನ್ನು ಆಕ್ರಮಿಸಿ, ಪ್ರಧಾನಿ ಮೋದಿಯನ್ನು ಬಂಧಿಸುವುದಾಗಿ ಹೇಳಿಕೆ ನೀಡಿದ್ದಾನೆ.
ಹಿರಿಯ ಸೇನಾಧಿಕಾರಿ ಪಾಕಿಸ್ಥಾನದಲ್ಲಿ ಗುಂಪನ್ನು ಉದ್ದೇಶಿಸಿ ಮಾತನಾಡುವಾಗ ಹಿಂದುಸ್ಥಾನವನ್ನು ನಾವು ವಶ ಪಡಿಸಿಕೊಂಡು ಅಲ್ಲಿನ ಪ್ರಧಾನಿ ನರೇಂದ್ರ ಮೋದಿಯನ್ನು ಬಂಧಿಸಿತರುತ್ತೇವೆ ಎಂದಿದ್ದಾನೆ.
ಅಷ್ಟು ಮಾತ್ರವಲ್ಲದೇ ಹಿದುಸ್ಥಾನವನ್ನು ಸಂಪೂರ್ಣವಾಗಿ ಇಸ್ಲಾಮ್ ದೇಶವನ್ನಾಗಿಸುತ್ತೇವೆ ಎಂದು ಹೇಳಿದ್ದಾನೆ. ಇದೀಗ ಈ ವಿಡೀಯೋ ಎಲ್ಲೆಡೆ ವೈರಲ್ಲಾಗಿದ್ದು, ಪಾಕ್‌ನ ಹಿರಿಯ ಅಧಿಕಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚೀಮಾರಿ ಹಾಕಲಾಗುತ್ತಿದೆ.
ಅಧಿಕಾರಿಯ ಈ ಹೆಳಿಕೆಗೆ ಭಾರತದ ಮೇಜರ್ ಜನರಲ್ ಗೌರವ್ ಆರ್ಯ ಪ್ರತಿಕ್ರಿಯೇ ನೀಡಿದ್ದು, ಭಾರತದ ಮೇಲೆ ಆಕ್ರಮಣ ಮಾಡುವ ಮೊದಲು ನಿನ್ನ ತೂಕ ಇಳಿಸಿಕೊ, ನಂತರ ಆಕ್ರಮಣ ಮಾಡುವ ಬಗ್ಗೆ ಮಾತನಾಡು ಎಂದು ಅಪಹಾಸ್ಯ ಮಾಡುವ ಮೂಲಕ ಉತ್ತರ ನೀಡಿದ್ದಾರೆ.





