ಹೈದರಾಬಾದ್ : ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಆರು ಗ್ಯಾರೆಂಟಿ ಸೇರಿದ ಕಾಂಗ್ರೆಸ್ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದರೆ “ಬಂಗಾರ ತೆಲಂಗಾಣದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಆರು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ತೆಲಂಗಾಣ ರಾಜ್ಯ ರಚನೆ ಮಾಡಿದ್ದೇವೆ. ಅದರ ಹೋರಾಟ ಮತ್ತು ಚಳುವಳಿಯನ್ನು ವ್ಯರ್ಥವಾಗಲು ಕಾಂಗ್ರೆಸ್ ಬಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ 6 ಗ್ಯಾರೆಂಟಿಗಳು
- ಮಹಾಲಕ್ಷ್ಮೀ
- ರೈತು ಬರೋಸಾ
- ಗೃಹ ಜ್ಯೋತಿ
- ಇಂದಿರಮ್ಮ ಇಂದ್ಲೂ
- ಯುವ ವಿಕಾಸಮ್
- ಚೇಯುತ
119 ಸದಸ್ಯ ಬಲದ ತೆಲಂಗಾಣ ವಿಧಾಸಭೆ ಚುನಾವಣೆಯ ಮತದಾನ ನವೆಂರ್ 30 ರಂದು ನಡೆಯಲಿದ್ದು, ಡಿಸೆಂಬರ್ 3 ರಂದು ಎಣಿಕೆ ಪ್ರಕ್ರಿಯೆ ನಡೆಯಲಿದೆ.




