ಕೋಲ್ಕತ್ತ: ರಾಮಕೃಷ್ಣ ಮಿಷನ್ ನ 16ನೇ ಅಧ್ಯಕ್ಷರಾಗಿದ್ದ ಸ್ವಾಮಿ ಸ್ಮರಣಾನಂದ (95) ಇಂದು ನಿಧನರಾಗಿದ್ದಾರೆ.
2017 ರಲ್ಲಿ ರಾಮಕೃಷ್ಣ ಮಿಷನ್ ಗೆ 16 ನೇ ಅಧ್ಯಕ್ಷರಾಗಿ ಸ್ಮರಣಾನಂದ ನಿಯುಕ್ತರಾಗಿದ್ದರು.
ಸ್ವಾಮಿ ಸ್ಮರಣಾನಂದ ಜಿ ಮಹಾರಾಜರು, ಅಧ್ಯಕ್ಷರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಇಂದು ರಾತ್ರಿ 8:14 ರ ವೇಳೆಗೆ ಮಹಾಸಮಾಧಿ ಹೊಂದಿದ್ದಾರೆ ಎಂದು ಮಠದ ಆಡಳಿತ ವರ್ಗ ಹೇಳಿಕೆಯಲ್ಲಿ ತಿಳಿಸಿದೆ.
ಮೂತ್ರನಾಳದ ಸೋಂಕಿನಿಂದ ಸ್ಮರಣಾನಂದ ಸ್ವಾಮಿ ಅವರನ್ನು ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನ ಕ್ಕೆ ಜ.29 ರಂದು ದಾಖಲಿಸಲಾಗಿತ್ತು. ನಂತರ ಅವರಿಗೆ ಉಸಿರಾಟದ ವೈಫಲ್ಯ ಎದುರಾಗಿತ್ತು. ಅದಕ್ಕಾಗಿ ಅವರನ್ನು ಮಾರ್ಚ್ 3 ರಂದು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.





