Mysore
18
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಸಂಸತ್‌ನಿಂದ ೧೪೧ ಸದಸ್ಯರ ಅಮಾನತು: ಇಂಡಿಯಾ ಪ್ರತಿಭಟನೆ

ನವದೆಹಲಿ : ಸಂಸತ್‌ ಭದ್ರತಾ ಲೋಪ ಖಂಡಿಸಿ ಗೃಹ ಸಚಿವರ ಹೇಳಿಕೆಗೆ ಸಂಬಂಧಿಸದಂತೆ ಪ್ರತಿಪಕ್ಷಗಳು ಹೋರಾಟ ನಡೆಸಿದ್ದರು. ಇದನ್ನು ಖಂಡಿಸಿ ವಿಪಕ್ಷಗಳ ೯೦ ಸಂಸದರನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ ಇಂಡಿಯಾ ಮೈತ್ರಿಕೂಟದ ಸಂಸದರು, ಸಂಸತ್‌ ಭವನದ ಮುಂದಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಸಂಸತ್‌ ಭದ್ರತಾ ವೈಫಲ್ಯ ಕುರಿತು ಸದನದ ಮುಂದೆ ಗೃಹ ಸಚಿವರ ಅಮಿತ್‌ ಶಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದರು. ರಾಜ್ಯ ಸಭೆ ಮತ್ತು ಲೋಕಸಭೆ ವತಿಯಿಂದ ಇವರಗೆ ೧೪೧ ಜನರನ್ನು ಅಮಾನತು ಮಾಡಲಾಗಿದೆ.

ಪೋಸ್ಟರ್‌ ಪ್ರದರ್ಶಿಸಿ, ಅಮಿತ್‌ ಶಾ ವಿರುದ್ಧ ಘೋಷಣೆ ಕೂಗುವ ಮೂಲಕ ಸಂಸದರ ಅಮಾನತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಸಂಸತ್‌ ಕಲಾಪಗಳ ಅಣುಕು ಪ್ರದರ್ಶನ ನಡೆಸಲಾಯಿತು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!