ಇಸ್ರೇಲ್: ಇಸ್ರೇಲ್ ಸೈನಿಕರು ಮಹಿಳೆಯರ ಒಳ ಉಡುಪು ಹಿಡಿದು ಗೇಲಿ ಮಾಡುತ್ತಿದ್ದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿವೆ.
ಈ ಫೋಟೋಗಳಲ್ಲಿ, ಇಸ್ರೇಲ್ ಸೈನಿಕರು ಯುದ್ಧದಲ್ಲಿ ಗೆದ್ದ ಗಾಜಾದ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿ ಸೈನಿಕರು ಮಹಿಳೆಯರ ಬಟ್ಟೆಯೊಂದಿಗೆ ಅಸಭ್ಯವಾಗಿ ಆಟವಾಡುತ್ತಿರುವುದು ಕಂಡು ಬಂದಿದೆ.
ಅಷ್ಟೇ ಅಲ್ಲ, ಅಲ್ಲಿನ ಮಹಿಳೆಯರ ಒಳ ಉಡುಪುಗಳ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿರುವ ವಿಡಿಯೋಗಳು ಬಾರಿ ವಿರೋಧಕ್ಕೆ ಕಾರಣವಾಗಿದೆ.
ಇಸ್ರೇಲ್ ಸೈನಿಕರು ಈ ರೀತಿ ನಡೆದುಕೊಳ್ಳುತ್ತಿರುವುದು ಅಲ್ಲಿನ ಮಹಿಳೆಯರಿಗೆ ಅವಮಾನಕರ ಎಂದು ಗಾಜಾದ ಜನತೆ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿಯ ವರ್ತನೆ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯೂ ಆಗಿದೆ. ಇಸ್ರೇಲಿ ಸೈನಿಕರ ಈ ವಿಡಿಯೋಗಳು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದು, ಸೈನಿಕರ ವಿರುದ್ಧ ಜಗತ್ತಿನಾದ್ಯಂತ ಬಾರಿ ಆಕ್ರೋಶ ವ್ಯಕ್ತವಾಗಿದೆ.





