Mysore
27
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಮೊದಲ ತೃತೀಯಲಿಂಗಿ ಮಹಿಳೆ

ಬೆಂಗಳೂರು ಮೂಲದ ರಿಯಾನಾ ರಾಜು ಎಂಬ ತೃತೀಯ ಲಿಂಗಿ ಮಹಿಳೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆಯುವ ಮೂಲಕ ಅಯ್ಯಪ್ಪನ ದರ್ಶನ ಪಡೆದ ಮೊದಲ ತೃತೀಯಲಿಂಗಿ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಹಲವು ವರ್ಷಗಳ ಹಿಂದೆ ಪುರುಷನಿಂದ ಮಹಿಳೆಯಾಗಿ ಬದಲಾಗಿದ್ದ ರಿಯಾನಾ ರಾಜು ಕೇರಳ ಸರ್ಕಾರದ ದೇವಸ್ವಂ ಬೋರ್ಡ್‌ ವೆಬ್‌ತಾಣದ ಮೂಲಕ ಪದೇಪದೇ ದೇವರ ದರ್ಶನಕ್ಕಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದರಾದರೂ ಒಮ್ಮೆಯೂ ಅವರಿಗೆ ಅನುಮತಿ ಸಿಕ್ಕಿರಲಿಲ್ಲ.

ಆದರೆ ಸತತವಾಗಿ ಪ್ರಯತ್ನಪಟ್ಟ ರಿಯಾನಾ ರಾಜು ಕೊನೆಗೂ ಅವಕಾಶ ಪಡೆದು ಯಶಸ್ವಿಯಾಗಿ ದೇವರ ದರ್ಶನ ಮಾಡಿ ಮುಗಿಸಿದ್ದಾರೆ. ಜನವರಿ 5ರಂದು ಶಬರಿಮಲೆ ತಲುಪಿದ ರಿಯಾನಾ ರಾಜು ಜನವರಿ 5ರಂದು ದರ್ಶನ ಪೂರೈಸಿದ್ದಾಗಿ ಹೇಳಿಕೊಂಡಿದ್ದಾರೆ.

ಇನ್ನು ತಾನು ದೇವಾಲಯ ತಲುಪಿದಾಗ ಅಲ್ಲಿನ ಭಕ್ತರು ಹಾಗೂ ಅರ್ಚಕನಿಂದ ನಿಂದನೆಗೆ ಒಳಗಾದ ವಿಷಯವನ್ನೂ ಸಹ ಬಿಚ್ಚಿಟ್ಟ ರಿಯಾನಾ ರಾಜು ತಾನು ಪುರುಷನಿಂದ ಮಹಿಳೆಯಾಗಿ ಬದಲಾದ ಕಾರಣ ಮಕ್ಕಳನ್ನು ಹೆರಲು ಸಾಧ್ಯವಿಲ್ಲ, ಹೀಗಾಗಿ ದೇವರ ದರ್ಶನ ಪಡೆಯಬಹುದು ಎಂದು ವಿವರಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!