Mysore
24
haze

Social Media

ಶುಕ್ರವಾರ, 02 ಜನವರಿ 2026
Light
Dark

ಇಂದು ದೇಶಾದ್ಯಂತ ʼINDIAʼ ಮೈತ್ರಿಕೂಟದಿಂದ ಪ್ರತಿಭಟನೆ

ನವದೆಹಲಿ: ಸಂಸತ್ ನಲ್ಲಿ ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಖಂಡಿಸಿ, ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿದ್ದವು. ಇದೇ ಕಾರಣಕ್ಕಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನೂರಾರು ವಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಈ ಕ್ರಮವನ್ನು ಖಂಡಿಸಿ, ಇಂದು ದೇಶಾದ್ಯಂತ ಇಂಡಿಯಾ ಮೈತ್ರಿಕೂಟದಿಂದ ಧರಣಿ ನಡೆಸಲು ಮುಂದಾಗಿವೆ.

ಸಂಸತ್ತಿನ ಉಭಯ ಸದನಗಳ 146 ವಿಪಕ್ಷ ಸದಸ್ಯರ ಅಮಾನತು ಖಂಡಿಸಿ, ಇಂದು ದೇಶಾದ್ಯಂತ ಇಂಡಿಯಾ ಮೈತ್ರಿಕೂಟದಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಲೋಕಸಭೆಯಲ್ಲಿನ ಭದ್ರತಾ ವೈಪಲ್ಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂಬುದಾಗಿ ಉಭಯ ಸದನಗಳ ಸದಸ್ಯರು ಗದ್ದಲವನ್ನು ಲೋಕಸಭೆ, ರಾಜ್ಯಸಭೆಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ಇದರಿಂದಾಗಿ ಲೋಕಸಭೆಯಿಂದ 100 ಹಾಗೂ ರಾಜ್ಯಸಭೆಯಿಂದ 45 ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು.

ಕೇಂದ್ರ ಸರ್ಕಾರದ ಈ ನಿರ್ಧರವನ್ನು ಕಟುವಾಗಿ ಟೀಕಿಸಿರುವಂತ ವಿಪಕ್ಷಗಳ ಸದಸ್ಯರು, ಸರ್ಕಾರ ವಿವಾದಾತ್ಮಕ ಮಸೂದೆಗಳನ್ನು ಸೂಕ್ತ ಚರ್ಚೆ ನಡೆಸದೇ ಅಂಗೀಕಾರ ಪಡೆದುಕೊಳ್ಳಲು ವಿಪಕ್ಷ ಸದಸ್ಯರನ್ನು ಅಮಾನತು ತಂತ್ರ ರೂಪಿಸಿದೆ ಎಂದು ಕಿಡಿಕಾರಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!