ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಅಂಚೆ ಚೀಟಿಗಳನ್ನು ಮತ್ತು ವಿಶ್ವದಾದ್ಯಂತ ರಾಮನ ಕುರಿತು ಬಿಡುಗಡೆ ಮಾಡಲಾದ ಅಂಚೆ ಚೀಟಿ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಿಡುಗಡೆ ಮಾಡಿದರು.
https://x.com/PTI_News/status/1747870922579558485?s=20
ಈ ಅಂಚೆ ಚೀಟಿಯಲ್ಲಿ ರಾಮ ಮಂದಿರ, ರಾಮಾಯಣ ಚೌಪಾಯಿ ‘ಮಂಗಲ್ ಭವನ ಅಮಂಗಲ್ ಹರಿ’, ಸೂರ್ಯ, ಸರಯೂ ನದಿ ಮತ್ತು ದೇವಾಲಯದ ಸುತ್ತಮುತ್ತಲಿನ ಶಿಲ್ಪಗಳು ಸೇರಿವೆ. ಆರು ಅಂಚೆಚೀಟಿಗಳು ರಾಮ ಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಮಾ ಶಬರಿ ಬಗ್ಗೆ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಚೆ ಚೀಟಿ ಪುಸ್ತಕವು 48 ಪುಟಗಳಿಂದ ಕೂಡಿದ್ದು, ಯುಎಸ್‌ಎ, ನ್ಯೂಜಿಲೆಂಡ್ಸ್, ಸಿಂಗಾಪುರ, ಕೆನಡಾ, ಕಾಂಬೋಡಿಯಾ ಮತ್ತು ಯುಎನ್ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಭಗವಾನ್ ರಾಮನ ಅಂಚೆ ಚೀಟಿಗಳನ್ನು ಒಳಗೊಂಡಿದೆ.
ರಾಮಮಂದಿರ ಪ್ರಾಣ ಪ್ರತಿಷ್ಠಾಪನ ಸಮಾರಂಭಕ್ಕೆ ಸಂಬಂಧಿಸಿದ ಮತ್ತೊಂದು ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ನನಗಿಂದು ಅವಕಾಶ ದೊರಕಿತು. ಇಂದು, ರಾಮಮಂದಿರಕ್ಕೆ ಸಮರ್ಪಿತವಾದ ಆರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ, ವಿಶ್ವದಾದ್ಯಂತ ಭಗವಾನ್ ರಾಮನ ಮೇಲೆ ಬಿಡುಗಡೆಯಾದ ಅಂಚೆ ಚೀಟಿಗಳ ಪುಸ್ತಕವನ್ನು ಸಹಾ ಬಿಡುಗಡೆಗೊಳಿಸಲಾಯಿತು ಎಂದು ಪ್ರಧಾನಿ ಮೋದಿ ಹೇಳಿದರು.
ರಾಮಾಯಣವು ಎಲ್ಲಾ ಸವಾಲುಗಳ ನಡುವೆಯೂ ಪ್ರೀತಿಯ ವಿಜಯದ ಬಗ್ಗೆ ನಮಗೆ ಕಲಿಸುತ್ತದೆ. ಇದು ಇಡೀ ಮಾನವೀಯತೆಯನ್ನು ತನ್ನೊಂದಿಗೆ ಸಂಪರ್ಕಿಸುತ್ತದೆ. ಅದಕ್ಕಾಗಿಯೇ ಅದು ಇಡೀ ಪ್ರಪಂಚದಾದ್ಯಂತ ಗಮನ ಸೆಳೆದಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.





