ಅಯೋಧ್ಯೆ: ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಂತರ ಇಂದು (ಜನವರಿ 22) ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ʼರಾಮ ಜ್ಯೋತಿʼ ಬೆಳಗಿಸಿದ್ದಾರೆ. ಜೊತೆಗೆ ಈ ಶುಭ ಸಮಾರಂಭದಲ್ಲಿ ದೇಶವಾಸಿಗಳೆಲ್ಲರು ತಮ್ಮ ಮನೆಯಲ್ಲಿ ರಾಮ ಜ್ಯೋತಿಯನ್ನು ಬೆಳಗಿಸುವ ಮೂಲಕ ರಾಮಲಲ್ಲಾರನ್ನು ಸ್ವಾಗತಿಸುವಂತೆ ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ.
ಎಲ್ಲಾ ದೇಶವಾಸಿಗಳು ರಾಮ ಜ್ಯೋತಿಯನ್ನು ಬೆಳಗಿಸುವ ಮೂಲಕ ಶ್ರೀರಾಮರನ್ನು ಸ್ವಾಗತಿಸಲು ನಾನು ವಿನಂತಿಸುತ್ತೇನೆ ಎಂದು ಜೈ ಸಿಯಾ ರಾಮ್ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಅವರ ಕರೆಗೆ ಅಂಗಡಿ ಮುಗ್ಗಟ್ಟುಗಳು, ಧಾರ್ಮಿಕ ಸ್ಥಳಗಳು, ಐತಿಹಾಸಿಕ ಸ್ಥಳಗಳಲ್ಲಿ ದೀಪ ಬೆಳಗಿಸುವ ಮೂಲಕ ರಾಮನಿಗೆ ಸ್ವಾಗತ ಕೋರಿದ್ದಾರೆ.
ಇದಕ್ಕೂ ಮೊದಲು, ಪ್ರಾದೇಶಿಕ ಪ್ರವಾಸೋದ್ಯಮ ಅಧಿಕಾರಿ ಆರ್.ಪಿ ಯಾದವ್, ಜನವರಿ 22 ರ ಸಂಜೆಯಂದು 100 ಪ್ರಮುಖ ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ ಎಂದು ಹೇಳಿದ್ದರು.