Mysore
22
broken clouds
Light
Dark

ಪಂಜಾಬ್‌ನಲ್ಲಿ ಪಿಎಂ ಭದ್ರತಾ ಲೋಪ: ಏಳು ಮಂದಿ ಪೊಲೀಸರ ಅಮಾನತ್ತು

ಪಂಜಾಬ್‌: ಕಳೆದ ವರ್ಷ ಪಂಜಾಬ್‌ನಲ್ಲಿ ರಸ್ತೆ ಮೂಲಕ ತೆರಳುತ್ತಿದ್ದ ವೇಳೆ  ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆ ಲೋಪಗಳ ಹಿನ್ನೆಲೆಯಲ್ಲಿ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಫೆಬ್ರವರಿ ೫ 2022 ರಂದು ಪ್ರಧಾನಿ ನರೇಂದ್ರ ಮೋದಿ ಬಂಜಾಬ್‌ನ ಬಟಿಂಡಾದಿಂದ ರಸ್ತೆ ಮೂಲಕ ಫಿರೋಜ್‌ಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ರೈತರು ರಸ್ತೆ ತಡೆ ನಡೆಸಿದರು. ಹೀಗಾಗಿ ಪ್ರಧಾನಿ ಮೋದಿಯವರ ವಾಹನವನ್ನು ಅವರ ಬೆಂಗಾವಲು ಪಡೆ ಸುಮಾರು 20 ನಿಮಿಷಗಳ ಕಾಲ ಫಿರೋಜ್‌ಪುರದ ಪ್ಯಾರಾನಾ ಮೇಲ್ಸೇತುವೆಯಲ್ಲಿ ನಿಲ್ಲಿಸಬೇಕಾಯಿತು.

ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪಣಜಾಬ್‌ ಮುಖ್ಯಮಂತ್ರಿಗೆ ಪತ್ರ ಬರೆಯಲಾಯಿತು. ಪತ್ರ ಬರೆದು ಸುಮಾರು ಒಂದು ವರ್ಷದ ಬಳಿಕೆ ಬಂಜಾಬ್‌ ಸರ್ಕಾರ ತನಿಖೆ ಕೈಗೊಳ್ಳುವ ಮೂಲಕ ಏಳು ಮಂದಿ ಪೊಲೀಸರನ್ನು ಅಮಾನತ್ತುಗೊಳಿಸಿದ್ದಾರೆ.

ಇದರಲ್ಲಿ ಬಟಿಂಡಾ ಎಸ್‌ಪಿ ಗುರ್ಬಿಂದರ್ ಸಿಂಗ್, ಡಿಎಸ್‌ಪಿ ಪರ್ಸನ್ ಸಿಂಗ್, ಡಿಎಸ್‌ಪಿ ಜಗದೀಶ್ ಕುಮಾರ್, ಇನ್‌ಸ್ಪೆಕ್ಟರ್ ತೇಜಿಂದರ್ ಸಿಂಗ್, ಇನ್‌ಸ್ಪೆಕ್ಟರ್ ಬಲ್ವಿಂದರ್ ಸಿಂಗ್, ಇನ್‌ಸ್ಪೆಕ್ಟರ್ ಜತೀಂದರ್ ಸಿಂಗ್ ಮತ್ತು ಎಎಸ್‌ಐ ರಾಕೇಶ್ ಕುಮಾರ್ ಅವರ ಹೆಸರುಗಳಿವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ