ನಿನ್ನೆ ( ಜನವರಿ 22 ) ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಇಟ್ಟು ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಈ ಮೂರ್ತಿಯನ್ನು ತಯಾರಿಸಿದ್ದರು ಎಂಬ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ.
ಇನ್ನು ರಾಮಮಂದಿರಕ್ಕಾಗಿ ರಾಮಲಲ್ಲಾ ಮೂರ್ತಿಗಳನ್ನು ಕೆತ್ತುವ ಕಾರ್ಯವನ್ನು ಮೂವರು ಶಿಲ್ಪಿಗಳಿಗೆ ವಹಿಸಲಾಗಿತ್ತು. ಈ ಪೈಕಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯನ್ನು ಪ್ರಾಣಪ್ರತಿಷ್ಠಾಪನೆ ಮಾಡಲು ಆಯ್ಕೆ ಮಾಡಲಾಗಿತ್ತು. ಹಾಗಾದರೆ ಉಳಿದ ಎರಡು ಮೂರ್ತಿಗಳು ಏನಾದವು ಎಂಬ ಪ್ರಶ್ನೆ ಹಾಗೂ ಕುತೂಹಲವಿತ್ತು.
ಈ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದ್ದು, ರಾಜಸ್ಥಾನದ ಜೈಪುರ ನಿವಾಸಿ ಸತ್ಯನಾರಾಯಣ ಪಾಂಡೆ ತಯಾರಿಸಿದ್ದ ರಾಮಲಲ್ಲಾ ಮೂರ್ತಿಯ ಫೋಟೊ ಹೊರಬಿದ್ದಿದೆ. ಬಿಳಿ ಮಕ್ರಾನಾ ಅಮೃತಶಿಲೆಯಿಂದ ಈ ಮೂರ್ತಿಯನ್ನು ತಯಾರಿಸಲಾಗಿದ್ದು, ಸದ್ಯ ಈ ಮೂರ್ತಿ ದೇವಸ್ಥಾನದ ಟ್ರಸ್ಟ್‌ನಲ್ಲಿದೆ. ಇನ್ನು ಕರ್ನಾಟಕದ ಮತ್ತೋರ್ವ ಶಿಲ್ಪಿ ಗಣೇಶ ಭಟ್ ತಯಾರಿಸಿದ್ದ ಮತ್ತೊಂದು ರಾಮಲಲ್ಲಾನ ಮೂರ್ತಿಯ ಚಿತ್ರ ಬಹಿರಂಗವಾಗಬೇಕಿದೆ.





